ಪ್ರವಾಸಿ ಕಂಡ ಇಂಡಿಯಾ ಭಾಗ-7

Author : ಎಚ್.ಎಲ್. ನಾಗೇಗೌಡ

Pages 472

₹ 300.00




Year of Publication: 2007
Published by: ಐಬಿಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ 3ನೇ ಹಂತ, ಬೆಂಗಳೂರು- 560085
Phone: 9845070613

Synopsys

‘ಪ್ರವಾಸಿ ಕಂಡ ಇಂಡಿಯಾ ಭಾಗ-7’ ನಾಡೋಜ ನಾಗೇಗೌಡ ಎಚ್.ಎಲ್ ಅವರ ಈ ಕೃತಿ ಅವರ ಸಾಹಿತ್ಯಿಕ ಬದುಕಿನಲ್ಲೇ ಬೃಹತ್ ಸಾಧನೆ ಎನಿಸುವಂತದ್ದು. ಪ್ರವಾಸಿಕಂಡ ಇಂಡಿಯಾ ಒಟ್ಟು ಎಂಟು ಸಂಪುಟಗಳಲ್ಲಿ ಪ್ರಕಟವಾಗಿದ್ದು ಇದು ಅವರ ಪ್ರವಾಸಿ ಕಂಡ ಇಂಡಿಯಾದ 7ನೇ ಸಂಪುಟ. ಈ ಕೃತಿಯಲ್ಲಿ ಹಲವಾರು ಮಹನೀಯರು ಭಾರತಕ್ಕೆ ಬಂದು ಇಲ್ಲಿ ಕಂಡ ವಿಸ್ಮಯಕಾರಿ ವಿಚಾರಗಳನ್ನು, ಸ್ಥಳಗಳನ್ನು ಕುರಿತಾಗಿ ಬರೆದ ಬರಹಗಳ ಕನ್ನಡ ಅನುವಾದವಾಗಿದೆ.

About the Author

ಎಚ್.ಎಲ್. ನಾಗೇಗೌಡ
(11 February 1915 - 10 September 2005)

ಜಾನಪದ ತಜ್ಞ, ಸಾಹಿತಿ, ದಕ್ಷ ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ ಮುಗಿಸಿದ ಅವರು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚನ್ನರಾಯಪಟ್ಟಣದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್‌, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಎಲ್‌.ಎಲ್‌.ಬಿ ಪದವಿ ಪಡೆದರು. ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜಪುರದಲ್ಲಿ.  ಆನಂತರ ಮೈಸೂರು ಸಿವಿಲ್‌ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು.  ಅಲ್ಲದೆ ...

READ MORE

Related Books