ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ

Author : ಇಬ್ರಾಹೀಮ್‌ ಸಈದ್

Pages 300

₹ 175.00




Year of Publication: 2010
Published by: ಶಾಂತಿ ಪ್ರಕಾಶನ
Address: ಬೆಂಗಳೂರು.

Synopsys

ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ ಅಧ್ಯಾತ್ಮಿಕ ಕೃತಿಯನ್ನು ಇಬ್ರಾಹಿಂ ಸಯೀದ್‌ ಅವರು ರಚಿಸಿದ್ದಾರೆ. ಪ್ರವಾದಿ ಮುಹಮ್ಮದ್(ಸ) ಅವರ ಜೀವನವು ಒಂದು ತೆರೆದ ಗ್ರಂಥ. ಅದನ್ನು ಯಾವುದೇ ಟೀಕೆ, ಟಿಪ್ಪಣಿ, ವಿಮರ್ಶೆ, ವಿವರಣೆ ಮತ್ತು ವಿಶದೀಕರಣವಿಲ್ಲದೆ ಜನರ ಮುಂದೆ ಇಟ್ಟರೆ ಸಾಕು. ಅದರಿಂದ ಪಾಠ ಹೊಂದುವ ಕೆಲಸ ವಾಚಕರೇ ಮಾಡಬಲ್ಲರು. ಈ ನಿಟ್ಟಿನಲ್ಲಿ, ಪ್ರವಾದಿ ಮುಹಮ್ಮದ್(ಸ) ಅವರ ಜೀವನದ ವಿವಿಧ ಘಟನೆಗಳನ್ನು ಯಥಾವತ್ತಾಗಿ ಕುರಾನ್ ಮತ್ತು ಹದೀಸ್ನ ಆಧಾರದಲ್ಲಿ ಮನಮುಟ್ಟುವ ರೀತಿಯಲ್ಲಿ ವಿವರಿಸಲಾಗಿರುವ ಒಂದು ಉತ್ತಮ ಗ್ರಂಥವಿದು.

About the Author

ಇಬ್ರಾಹೀಮ್‌ ಸಈದ್
(20 May 1945 - 27 May 2017)

ಲೇಖಕ ಇಬ್ರಾಹೀಮ್ ಸಈದ್ ಅವರು ಬಿ.ಕಾಂ ಪದವೀಧರರು. 1945 ಮೇ 20 ರಂದು ಜನಿಸಿದರು. ತಂದೆ ಕೆ. ಸಈದ್, ತಾಯಿ  ಕೆ. ಫಾತಿಮಾ. ಮಂಗಳೂರು ವಿಶ್ವವಿದ್ಯಾಲಯದಿಂದ ರಾಜ್ಯಕ್ಕೆ 3ನೇ ರ್‍ಯಾಂಕ್ ನೊಂದಿಗೆ (ಹಿಂದಿ )ಸ್ನಾತಕೋತ್ತರ  ಪದವೀಧರರು. 1973 ಏಪ್ರಿಲ್ 23 ರಂದು ಆರಂಭವಾದ ಸನ್ಮಾರ್ಗ ವಾರಪತ್ರಿಕೆಯ ಪ್ರಥಮ ಸಂಪಾದಕರಾಗಿ ತಮ್ಮ ಜೀವಿತಾವಧಿಯವರೆಗೂ ಮುಂದುವರಿದಿದ್ದರು. ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್, ಮಲಯಾಳಂ, ಬ್ಯಾರಿ, ಅರಬಿ ಭಾಷೆಗಳನ್ನು ತಿಳಿದಿದ್ದು, ಕನ್ನಡ, ಬ್ಯಾರಿ, ಉರ್ದು ಭಾಷೆಯಲ್ಲಿ ನಿರರ್ಗಳವಾಗಿ ಉಪನ್ಯಾಸಗಳನ್ನು ನೀಡುತ್ತಿದ್ದರು.  ಕೃತಿಗಳು: ಪ್ರವಾದಿ ಜೀವನ ಮತ್ತು ಸಂದೇಶ, ತಪ್ಪು ಕಲ್ಪನೆಗಳು, ಲೋಕಾನುಗ್ರಹಿ, ಸಹಸ್ರ ಹದೀಸ್ ಗಳು, ನೂರೆಂಟು ...

READ MORE

Related Books