ಪ್ರವಾಸಿ ಕಂಡ ಇಂಡಿಯಾ, ಸಂಪುಟ-6

Author : ಎಚ್.ಎಲ್. ನಾಗೇಗೌಡ

Pages 454

₹ 280.00




Year of Publication: 2007
Published by: ಐಬಿಎಚ್ ಪ್ರಕಾಶನ
Address: # 18/1, 1ನೇ ಮಹಡಿ, 17ನೇ ಸಿ-ಅಡ್ಡರಸ್ತೆ, ಎನ್. ಆರ್. ಕಾಲೊನಿ, ಬೆಂಗಳೂರು-560019
Phone: 080 2667 6003

Synopsys

ಜಾನಪದ ತಜ್ಞ ಡಾ. ಎಚ್.ಎಲ್. ನಾಗೇಗೌಡರು ‘ಪ್ರವಾಸಿ ಕಂಡ ಇಂಡಿಯಾ’ ಶೀರ್ಷಿಕೆಯಡಿ ಒಟ್ಟು 8 ಸಂಪುಟಗಳನ್ನು ಪ್ರಕಟಿಸಿದ್ದು, ಆ ಪೈಕಿ ಈ ಕೃತಿಯು 6ನೇ ಸಂಪುಟವಾಗಿದೆ. ವಿದೇಶಿ ಪ್ರವಾಸಿಗರು ಇಂಡಿಯಾಕ್ಕೆ ಭೇಟಿ ನೀಡಿ ಇಲ್ಲಿಯ ಸಾಂಸ್ಕೃತಿಕ, ಸಾಮಾಜಿಕ, ಇತಿಹಾಸ, ವಾಸ್ತುಶಿಲ್ಪ, ಕಲೆ ಇತ್ಯಾದಿ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳ ದಾಖಲೆಗಳನ್ನು ಕನ್ನಡಕ್ಕೆ ಅನುವಾದಿಸಿದ ಸರಣಿ ಪಠ್ಯವನ್ನು ಒಳಗೊಂಡಿದೆ.

About the Author

ಎಚ್.ಎಲ್. ನಾಗೇಗೌಡ
(11 February 1915 - 10 September 2005)

ಜಾನಪದ ತಜ್ಞ, ಸಾಹಿತಿ, ದಕ್ಷ ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ ಮುಗಿಸಿದ ಅವರು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚನ್ನರಾಯಪಟ್ಟಣದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್‌, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಎಲ್‌.ಎಲ್‌.ಬಿ ಪದವಿ ಪಡೆದರು. ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜಪುರದಲ್ಲಿ.  ಆನಂತರ ಮೈಸೂರು ಸಿವಿಲ್‌ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು.  ಅಲ್ಲದೆ ...

READ MORE

Related Books