ಪ್ರಾಯೋಗಿಕ ವಿಮರ್ಶೆ ಕಾವ್ಯಾನುಸಂಧಾನ

Author : ಡಿ.ಡಿ. ರಾಮಕೃಷ್ಣ

Pages 342

₹ 325.00




Year of Publication: 2018
Published by: ಪ್ರಕೀರ್ಣ ಪ್ರಕಾಶನ
Address: #5925, ವಿಜಯನಗರ 2ನೇ ಹಂತ, ಕೊಡವ ಸಮಾಜ ಕಟ್ಬಡ ಬಳಿ, ಮೈಸೂರು-570017
Phone: 9448092958

Synopsys

ಕಾವ್ಯದ ಓದು ಕೊನೆಯಾಗದು. ಅರಿವಿನ ಸಹವಾಸದಲ್ಲಿ ಹೊಸತನವನ್ನು ಪಡೆಯುತ್ತಲೇ ಹೋಗುತ್ತದೆ. ಕೆರೆಗೆ ಹಾರ ಎಂಬ ಜಾನಪದ ಕವಿತೆ ಕುರಿತು ತಿ.ನಂ. ಶ್ರೀಕಂಠಯ್ಯ, ನಾಗವರ್ಮನ ಒಂದು ಪದ್ಯಾನುಸಂಧಾನ ಸರೋವರದ ಸಿರಿಗನ್ನಡಿ ಕುರಿತು ಕುವೆಂಪು, ಪಂಪನ ಕವಿತೆ; ಅನುಸಂಧಾನ ಮಾರ್ಗ ಕುರಿತು ಕೆ.ವಿ.ಸುಬ್ಬಣ್ಣ, ರನ್ನನ ಒಂದು ಪದ್ಯ: ಕಂ.ಕೊಂ.ಕೌಂ ಕುರಿತು ಪೋಲಂಕಿ ರಾಮಮೂರ್ತಿ ಹೀಗೆ ವಿವಿಧ ಲೇಖಕರು-ಚಿಂತಕರು-ವಿಮರ್ಶಕರು ಬರೆದ ಕಾವ್ಯಗಳ ಸುಮಾರು 31 ವಿಮರ್ಶಾ ಲೇಖನಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.

ಕಾವ್ಯ ಸಾಹಿತ್ಯ ಕುರಿತ ಅಭ್ಯಾಸಿಗಳಿಗೆ ಇಲ್ಲಿಯ ಲೇಖನಗಳು ಅಸಂಖ್ಯಾತ ಸುಳಿವುಗಳನ್ನು-ಒಳನೋಟಗಳನ್ನು ನೀಡುತ್ತದೆ. ವಿವಿಧ ಕಾವ್ಯದ ಮೇಲೆ ಹಿರಿಯ ತಲೆಮಾರಿನ ಲೇಖಕರು ಬರೆದ ವಿಮರ್ಶೆಗಳಿಂದ ಹಿಡಿದು ಇತ್ತೀಷೆಗೆ ಬರೆಯುವ ಸಾಹಿತಿಗಳವರೆಗಿನ ವಿಮರ್ಶಾತ್ಮಕ ಲೇಖನಗಳು ಇಲ್ಲಿವೆ. ಕಾವ್ಯ ವಿಮರ್ಶೆಗಳ ಅಧ್ಯಯನ ದೃಷ್ಟಿಯಿಂದ ಈ ಕೃತಿ ಮಾರ್ಗದರ್ಶಿಯಾಗಿದೆ.

About the Author

ಡಿ.ಡಿ. ರಾಮಕೃಷ್ಣ
(09 December 1982)

ಲೇಖಕ ಡಿ. ಡಿ. ರಾಮಕೃಷ್ಣ ಅವರು ಮೈಸೂರಿನವರು. 1982ರ ಡಿಸೆಂಬರ್ ೦9 ರಂದು ಜನನ. ಮೈಸೂರು ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ಪ್ರಾಯೋಗಿಕ ವಿಮರ್ಶೆ ಕಾವ್ಯಾನುಸಂದಾನ ಕೃತಿ ರಚಿಸಿದ್ದಾರೆ. ...

READ MORE

Related Books