ಪ್ರೀತಿ ಪದಗಳ ಸಹಯಾನಿ ವಿಠ್ಠಲ

Author : ಮೀನಾಕ್ಷಿ ಬಾಳಿ

Pages 360

₹ 400.00




Year of Publication: 2022
Published by: ಕ್ರಿಯಾ ಪ್ರಕಾಶನ
Address: #12, ಥಾನಪ್ಪ ಗಾರ್ಡನ್, 18ನೇ ಕ್ರಾಸ್, ಸಂಪಂಗಿರಾಮನಗರ, ಬೆಂಗಳೂರು-560027
Phone: 0802223 4369

Synopsys

ಲೇಖಕಿ ಮೀನಾಕ್ಷಿ ಬಾಳಿ ಅವರ ಸಂಪಾದಕೀಯ ಸಂಯೋಜನೆಯ ಬರಹಗಳ ಕೃತಿ-ಪ್ರೀತಿ ಪದಗಳ ಸಹಯಾನಿ ವಿಠ್ಠಲ. ಡಾ. ವಿಠ್ಠಲ ಭಂಡಾರಿ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣ ಗ್ರಾಮದ ನಿವಾಸಿಯಾಗಿದ್ದು, ರಂಗಕರ್ಮಿ ಎಂದೇ ಹೆಸರುವಾಸಿ. ಅವರ ನೆನಪಿನಲ್ಲಿ ಹತ್ತು ಹಲವು ರಂಗಭೂಮಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸಾಹಿತ್ಯಾಸಕ್ತೊಇಯ ವಿಠ್ಠಲ ಸಹಯಾನಿ ರಂಗಭೂಮಿ ಮೂಲಕ ಸಮಾಜ ಜಾಗೃತಿಗೆ ಶ್ರಮಿಸಿದವರು. ಇಂತಹವರ ವ್ಯಕ್ತಿ ಚಿತ್ರಣವನ್ನು ಅವರ ಒಡನಾಡಿ ರಂಗಾಸಕ್ತರು ನೀಡಿರುವ ಬರಹಗಳನ್ನು ಸಂಪಾದಿಸಿದ್ದು, ಈ ಕೃತಿಯ ಹೆಗ್ಗಳಿಕೆ.

About the Author

ಮೀನಾಕ್ಷಿ ಬಾಳಿ
(22 June 1962)

ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ.    ...

READ MORE

Related Books