ಪ್ರೇಮವೀಣೆ

Author : ಮಾರುತಿ ದೊಡ್ಡಕೋಡಿಹಳ್ಳಿ

Pages 83

₹ 90.00




Year of Publication: 2023
Published by: ಯದುನಂದನ ಪ್ರಕಾಶನ
Address: 1, ನೆಲಮಹಡಿ, ಬಿ.ಹೊನ್ನೇನಹಳ್ಳಿ, ಓಬಳಾಪುರ ಅಂಚೆ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲೂಕು, ಹಾಸನ - 573111
Phone: 9108554099

Synopsys

ಪ್ರೇಮವೀಣೆ ಕವನ ಸಂಕಲನ 50 ಕವಿತೆಗಳನ್ನು ಒಳಗೊಂಡಿದೆ. ಇದರಲ್ಲಿ ಓದುಗರಿಗೆ ಜಾತಿಭೂತ, ಧಾರ್ಷ್ಟ್ಯ ಮನ, ಶ್ರೀಸಾಮಾನ್ಯರು, ದಾಸ್ಯ, ಪರಿವರ್ತನೆ,ಕರ್ಮಫಲ, ಆರ್ತನಾದ, ಸಮಾನತೆ ರಾಯಭಾರಿ,ಗ್ರಹಣ ಹೀಗೆ ನಾನಾ ಪ್ರಮುಖ ಕವಿತೆಗಳು ಮನಸ್ಸಿಗೆ ಕಾಡುತ್ತವೆ. ಇವುಗಳು ಸಮಾಜದಲ್ಲಿ ಕಂಡು ಬರುವ ಸಾಮಾಜಿಕ ಅಸಮಾನತೆ, ವರ್ಣ ವ್ಯವಸ್ಥೆ, ಲಿಂಗ ತಾರತಮ್ಯ, ಶೋಷಣೆಯನ್ನು ಕವಿ ಕಠೋರವಾದ ಪದಗಳ ಮೂಲಕವೇ ಖಂಡಿಸಿದ್ದಾರೆ. "ಕೋಮುವಾದ ನಾಮದೊಳು ಕೆಸರ ಎರೆಚಾಟ ಜಗಶುದ್ಧ ಮಾಡ ಹೊರಟ ಬೂಟಾಟಿಕೆಯ ಹೋರಾಟ ಜಾಗೃತಿಯ ಮೂಡಲಿ ಜನಮಾನಸದಲಿ ತೊಲಗಲಿ ಜಾತಿಭೂತ ಪ್ರಜ್ಞಾವಂತ ಸಮಾಜದಲಿ, ಜಾತಿಭೂತ ಎಂಬ ಕವಿತೆಯ ಈ ಸಾಲುಗಳು ಪ್ರಸ್ತುತ ನಡೆಯುತ್ತಿರುವ ಕೋಮುಗಲಭೆ, ಜಾತಿ ವ್ಯವಸ್ಥೆ ಸೇರಿದಂತೆ ಧರ್ಮಾಂಧತೆಯ ಪ್ರತಿಬಿಂಬವಾಗಿ ನಿಲ್ಲುತ್ತವೆ. ಹಾಗೆಯೆ ‘ಗೋಸುಂಬೆಯ ಬಣ್ಣ ಬಣ್ಣದ ರೂಪಗಳು ಅಕ್ಷಿಯೊಳು ಹೊಕ್ಕು ಮಂತ್ರಸಾನಿಯ ದುಷ್ಕೃತ್ಯಗಳು.... ಎಂಬ ಸಾಲುಗಳೂ ಲೋಕದೆದುರು ಹಸಿಹಸಿ ಸುಳ್ಳುಗಳ ತೆರೆತೆರೆಯಾಗಿ ಬಿಚ್ಚುಡುತಿವೆ’ ಹಾಗೆಯೇ ಈ ಕವನ ಹಲವಾರು ಚಿಂತನೆಗಳನ್ನು ಮನಸ್ಸಿಗೆ ಹರಿಬಿಡುತ್ತದೆ.

About the Author

ಮಾರುತಿ ದೊಡ್ಡಕೋಡಿಹಳ್ಳಿ

ಮಾರುತಿ ದೊಡ್ಡಕೋಡಿಹಳ್ಳಿ ಅವರು ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕು ಹಳೇಬೀಡು ಹೋಬಳಿಯವರು. ತಾಯಿ ಪುಟ್ಟಮ್ಮ ತಂದೆ ಬರ್ಮೊಜಿರಾವ್. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಪ್ರಾರ್ಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾಗಿ ಬೇಲೂರು ತಾಲೂಕಿನ ಸ.ಕಿ.ಪ್ರಾ.ಶಾಲೆ ಅಗ್ಗಡಲು, ಸ.ಕಿ.ಪ್ರಾ.ಶಾಲೆ ಮಲ್ಲನಹಳ್ಳಿ, ಸ.ಹಿ.ಪ್ರಾ.ಬಾಲಕಿಯರ ಶಾಲೆ ಬೇಲೂರು ಇಲ್ಲಿ 15 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅವರು ಅನೇಕ ಕವನಗಳನ್ನು ರಚಿಸಿದ್ದಾರೆ. ಇವರ ಕವನಗಳು ಜಿಲ್ಲೆಯ ಹಲವಾರು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಜನಮನ್ನಣೆ ಗಳಿಸಿವೆ. ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ...

READ MORE

Related Books