ಪ್ರೇರಣಾ (ಸ್ಮರಣ ಸಂಚಿಕೆ)

Author : ವಿಜಯಕುಮಾರ ಜಿ. ಪರುತೆ

Pages 64

₹ 30.00




Year of Publication: 2001
Published by: ಮಹಿಳಾ ಮಂಡಳ ಬೆಳ್ಳಿ ಹಬ್ಬ ಸ್ವಾಗತ ಸಮಿತಿ
Address: ಚಿಂಚೋಳಿ-ಚಂದಾಪುರ, ತಾಲೂಕು ಚಿಂಚೋಳಿ, ಜಿಲ್ಲೆ: ಕಲಬುರಗಿ

Synopsys

ಲೇಖಕ ಡಾ.ವಿಜಯಕುಮಾರ ಜಿ ಪರುತೆ ಅವರು ಸಂಪಾದಿಸಿದ ಸ್ಮರಣ ಸಂಚಿಕೆ-ಪ್ರೇರಣಾ. ಕಳೆದ 25 ವರ್ಷಗಳಲ್ಲಿ ಚಿಂಚೋಳಿ-ಚಂದಾಪುರ ಮಹಿಳಾ ಮಂಡಳವು ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ, ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೈಗೊಂಡಿದೆ. ವಿಶ್ವ ಮಹಿಳಾ ವರ್ಷದ ಪ್ರೇರಣೆ ಅಂಗವಾಗಿ ಕೃತಿ ಪ್ರಕಟಗೊಂಡಿದೆ.ಮಹಿಳೆ ಮತ್ತು ಸಂಸ್ಕೃತಿ ಸ್ತ್ರೀ ಮತ್ತು ಶಿಕ್ಷಣ, ಸ್ತ್ರೀ ಮತ್ತು ವರದಕ್ಷಿಣೆ, ರೂಪದರ್ಶಿ ಮಹಿಳೆ, ವಾಯುಯಾನ, ರಾಷ್ಟ್ರ ನಿರ್ಮಾಣದ ಲ್ಲಿ ಸ್ತ್ರೀ ಪಾತ್ರ, ಸ್ತ್ರೀ ಮತ್ತು ಆರೋಗ್ಯ ಶಾಂತಿ ಸಮಾಜ, ಶಿಶು ಪಾಲನೆ ಮತ್ತು ಮಹಿಳೆ ಹೀಗೆ ಮಹಿಳಾ ಸಬಲೀಕರಣ ಹಾಗೂ ಜಾಗೃತಿ ಮೂಡಿಸುವ ಲೇಖನಗಳಿವೆ.

About the Author

ವಿಜಯಕುಮಾರ ಜಿ. ಪರುತೆ
(18 May 1963)

ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...

READ MORE

Related Books