ಪನ್ ಪನ್ ಸಂತ; ನೆಮ್ಮದಿಯ ಬದುಕಿಗೆ ಬದಲಿ ದಾರಿ

Author : ಆನಂದತೀರ್ಥ ಪ್ಯಾಟಿ

Pages 36

₹ 50.00




Year of Publication: 2018
Published by: ಕೃಷಿ ಮಾಧ್ಯಮ ಕೇಂದ್ರ
Address: 113, 2ನೇ ಮಹಡಿ, 6ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಪಿಳ್ಳಪ್ಪ ಬ್ಲಾಕ್, ಗಂಗಾನಗರ, ಅಂಚೆ: ಆರ್.ಟಿ.ನಗರ, ಬೆಂಗಳೂರು 560032
Phone: 9483757707

Synopsys

ಜೀವನ ಸುಲಭ; ಅದನ್ಯಾಕೆ ಅಷ್ಟೊಂದು ಕಠಿಣ ಮಾಡಿಕೊಳ್ಳಬೇಕು? ಥಾಯ್ಲೆಂಡಿನ ಚಾಂಗ್ ಮಾಯಿ ಸಮೀಪವಿರುವ ಪನ್ ಪನ್ ಸೆಂಟರ್ ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕಿನ ಅನನ್ಯ ಕೇಂದ್ರ. ದೇಸಿ ಬೀಜ ಸಂರಕ್ಷಣೆ, ನೈಸರ್ಗಿಕ ಮನೆ, ಯುಕ್ತ ತಂತ್ರಜ್ಞಾನಕ್ಕೆ ಒತ್ತು. 2003ರಲ್ಲಿ ಜಾನ್ ಜಾನ್ದಾಯ್ ಹಾಗೂ ಪೆಗ್ಗಿ ರೀಂಟ್ಸ್ ಅವರಿಂದ ಸ್ಥಾಪನೆ. "ಜೀವನ ಸುಲಭ; ಅದನ್ಯಾಕೆ ಅಷ್ಟೊಂದು ಕಠಿಣ ಮಾಡಿಕೊಳ್ಳಬೇಕು?" ಎನ್ನುತ್ತ ಪ್ರಕೃತಿ ಜತೆ ಸರಳವಾಗಿ ಬದುಕುತ್ತಿರುವ ಈ ರೈತ 'ಜೋ' ಎಂದೇ ಹೆಸರುವಾಸಿ. ಮಣ್ಣಿನ ಮನೆಗಳ ನಿರ್ಮಾಣ ಕಲೆಯಲ್ಲಿ ಪರಿಣತ. ‘ಒಂದು ಹುಲ್ಲಿನ ಕ್ರಾಂತಿ’ಯ ಮಸನೊಬು ಫುಕುವೊಕ ನಮ್ಮ ಕೃಷಿ ಹಾಗೂ ಬದುಕಿಗೆ ಹೊಸ ದೃಷ್ಟಿ ನೀಡಿದ ಹಾಗೆ ಜೋ ಕೂಡ ನೆಮ್ಮದಿಯ ಜೀವನಕ್ಕೆ ಸರಳ ಸೂತ್ರಗಳನ್ನು ಪ್ರತಿಪಾದಿಸುತ್ತಿದ್ದಾರೆ. ಅದರಂತೆ ಬದುಕುತ್ತಿದ್ದಾರೆ.. ಸದ್ದಿಲ್ಲದೆ ಜಗತ್ತೇ ಅವರತ್ತ ನೋಡತೊಡಗಿದೆ.

ಬೆಂಗಳೂರಿನಿಂದ ವಿಮುಖರಾಗಿ ಕೊಪ್ಪಳದ ಹಳ್ಳಿಯಲ್ಲಿ ಸಾವಯವ ಕೃಷಿ ಮಾಡುತ್ತ, ಬಿಡುವಿನಲ್ಲಿ ಕಾಲಿಗೆ ಚಕ್ರ – ಬೆನ್ನಿಗೆ ರೆಕ್ಕೆ ಕಟ್ಟಿಕೊಂಡು ದೇಶ-ವಿದೇಶದ ಸಾವಯವ ತಾಣಗಳಿಗೆ ಹಾರಿಹೋಗುತ್ತಿರುವ ಆನಂದತೀರ್ಥ ಪ್ಯಾಟಿ ಗೆಳೆಯರೊಡಗೂಡಿ ಥಾಯ್ಲೆಂಡಿಗೆ ಹೋಗಿಬಂದರು. ಪನ್ ಪನ್ ಸೆಂಟರಿಗೆ ಭೇಟಿ ನೀಡುವ ಅವರ ಕನಸು ನನಸಾಯಿತು. ಜಾನ್ ಜಾನ್ದಾಯ್ ಹಾಗೂ ಪನ್ ಪನ್ ಸೆಂಟರ್ ಕುರಿತ ವಿವರ ಈ ಸಚಿತ್ರ ಪುಸ್ತಕದಲ್ಲಿದೆ.

About the Author

ಆನಂದತೀರ್ಥ ಪ್ಯಾಟಿ
(14 June 1975)

ಮೂಲತಃ ಕೊಪ್ಪಳದವರಾದ ಆನಂದ ತೀರ್ಥ ಪ್ಯಾಟಿ ಅವರು ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಪ್ರಜಾವಾಣಿ ಪತ್ರಿಕೆಯಲ್ಲಿ ಬೆಂಗಳೂರು, ಕಲಬುರಗಿಗಳಲ್ಲಿ ಉಪಸಂಪಾದಕ/ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಕೃಷಿ ನಿರತರಾಗಿರುವ ಪ್ಯಾಟಿ ಅವರು ಕೃಷಿಗೆ ಸಂಬಂಧಿಸಿದ ಬರವಣಿಗೆಯಲ್ಲಿ ವಿಶೇಷ ಆಸಕ್ತಿ ಉಳ್ಳವರು. ಕರ್ನಾಟಕ ಸರ್ಕಾರ ನೀಡುವ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...

READ MORE

Related Books