ಪುಣ್ಯಕೋಟಿಯ ಕಥೆಯ ಹೇಳಲೇನು?

Author : ಟಿ.ಎಸ್. ರಮಾನಂದ

Pages 176

₹ 150.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಗೋವಿನ ಕಥೆಯ ರಾಜಕಾರಣ ನಡೆಯುತ್ತಿರುವ ಹೊತ್ತಿನಲ್ಲಿಯೇ ಲೇಖಕರು ಗೋವಿ ಭೂತಕಾಲದಿಂದ ಪ್ರಸ್ತುತ ಕಾಲದವರೆಗೂ ಹಸುವಿನ ಮೂಲ , ಜೀವನ, ಆಧ್ಯಾತ್ಮಿಕತೆ, ವಾಣಿಜ್ಯ ಮೌಲ್ಯಗಳನ್ನು,ಲೇಖಕರು ವಿವರಿಸಿದ್ದಾರೆ.

ಅದು ಕೆಲವರ ಆಹಾರವಾಗಿದ್ದು ಆಹಾರ ಸಂಸ್ಕೃತಿಯನ್ನು ಗೌರವಿಸಿ ಎನ್ನುವ ವಾದ ಒಂದು ಕಡೆ. 'ಗೋಮಾತೆಯನ್ನು ತಿನ್ನೋದುಂಟಾ? ಗೋಹತ್ಯೆ ನಿಲ್ಲಬೇಕು' ಅನ್ನುವುದು ಇನ್ನೊಂದು ವಾದ. ಬದುಕಿದ್ದಾಗ ಮಾತ್ರವಲ್ಲೂ ಸತ್ತ ಮೇಲೂ ಗೋವಿನಿಂದ ಮನುಷ್ಯ ಪಡೆಯುವ ಪ್ರಯೋಜನಗಳಿವೆ ಹೀಗೆ ಗೋವಿನ ಬಗ್ಗೆ ಪಶುವೈದ್ಯ ಡಾ.ಟಿ.ಎಸ್.ರಮಾನಂದ ಅವರು 'ಪುಣ್ಯಕೋಟಿಯ ಕಥೆಯ ಹೇಳಲೇನು?' ಕೃತಿಯಲ್ಲಿ ಹಸುವಿನ ಪಯಣವನ್ನು ದಾಖಲಿಸದ್ದಾರೆ.

About the Author

ಟಿ.ಎಸ್. ರಮಾನಂದ

ವೃತ್ತಿಯಿಂದ ಪಶುವೈದ್ಯರಾದ ಡಾ. ಟಿ.ಎಸ್‌. ರಮಾನಂದ ಅವರು ಪ್ರವೃತ್ತಿಯಿಂದ ಲೇಖಕರು. ತಮ್ಮ ವೈದ್ಯಕೀಯ ಅನುಭವವನ್ನು ಸೊಗಸಾದ ರೀತಿಯಲ್ಲಿ ಅಕ್ಷರಕ್ಕೆ ಇಳಿಸಿದ್ದಾರೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. 1974 ರಿಂದ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2006 ರಲ್ಲಿ ನಿವೃತ್ತರಾದರು. ಸದ್ಯ ಶಿವಮೊಗ್ಗ ನಿವಾಸಿ. 'ವೈದ್ಯರ ಶಿಕಾರಿ', 'ದಿಟನಾಗರ ಕಂಡರೆ' ಮತ್ತು 'ವೃತ್ತಿ ಪರಿಧಿ'  ಇವು ಮೂರು ಪ್ರಕಟಿತ ಕೃತಿಗಳು. ವೃತ್ತಿಯ ಅನುಭವವನ್ನು ತಮ್ಮ ಆಕರ್ಷಕ ಶೈಲಿ ಬರವಣಿಗೆಯ ಮೂಲಕ ಕೃತಿಗಳಾಗಿಸಿದ್ದಾರೆ. ಪಶುವೈದ್ಯರ ವಿಶಿಷ್ಟ ಹಾಗೂ ವಿಶೇಷ ಜೀವನಾನುಭವಗಳನ್ನು ಸಮಾಜಕ್ಕೆ ತಲುಪಿಸಿದ್ದಾರೆ. ...

READ MORE

Related Books