ಪುರಾಣ ಚಿಂತನ-ಮಂಥನ

Author : ವಿಷ್ಣು ಜೋಷಿ

Pages 150

₹ 100.00




Year of Publication: 2009
Published by: ಉದಯ ಪ್ರಕಾಶನ
Address: #984, 11ನೇ ’ಎ’ ಮುಖ್ಯರಸ್ತೆ, 3ನೇ ವಿಭಾಗ, ರಾಜಾಜಿನಗರ, ಬೆಂಗಳೂರು- 560010
Phone: 08023389143

Synopsys

ಹಿರಿಯ ಲೇಖಕ ಪ್ರೊ. ವಿಷ್ಣು ಜೋಶಿ ಅವರ ‘ಪುರಾಣ ಚಿಂತನ-ಮಂಥನ’ ಒಂದು ವಿಶಿಷ್ಟ ಗ್ರಂಥ.  ಭಾರತೀಯ ಸಂಸ್ಕೃತಿಯ ಉನ್ನತ ಆದರ್ಶಗಳನ್ನು, ಮೌಲ್ಯಗಳನ್ನೂ ಈ ಗ್ರಂಥವು ಎತ್ತಿ ಹಿಡಿಯುತ್ತದೆ.. ಪ್ರಾಚೀನ ಭಾರತೀಯ ಸಂಸ್ಕೃತಿಯು ಉಪನಿಷತ್ತು ಭಗವದ್ ಗೀತೆ, ರಾಮಾಯಣ ಮಹಾಭಾರತ ಮತ್ತು ಶಾಂಖರ ಸಾಹಿತ್ಯಗಳ ಮೂಲಕ ಆಕಾರ ಪಡೆದಿದೆ. ಲೇಖಕರು ಆ ಎಲ್ಲ ಶ್ರೇಷ್ಠ ಗ್ರಂಥಗಳ ವ್ಯಾಸಂಗದಿಂದ ಇಲ್ಲಿಯ ಪುರಾಣ ಚಿಂತನ-ಮಂಥನಗಳಿಗೆ ವೈಚಾರಿಕ ನೆಲೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

About the Author

ವಿಷ್ಣು ಜೋಷಿ

ವಿಷ್ಣು ಜೋಷಿ ಅವರು ಮೂಲತಃ ಕುಮಟಾ ತಾಲೂಕಿನ ಕಲ್ಲಬ್ಬಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಮತ್ತು ಕನ್ನಡ  ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರು. ಕುಮಟಾದ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಹಿರಿಯ ಶ್ರೇಣಿಯ ಉಪನ್ಯಾಸಕರಾಗಿದ್ದಾರೆ. ಅಸ್ಖಲಿತ ಸಾಂಸ್ಕೃತಿಕ ವಾಗ್ಮಿಗಳು.  ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು, ಭಗವದ್ಗೀತೆ, ಭಾಗವತ, ಸಂಸ್ಕೃತ ಕಾವ್ಯ ಮತ್ತು ನಾಟಕಗಳ ಬಗ್ಗೆ ನಾಡಿನಾದ್ಯಂತ ಉಪನ್ಯಾಸ ನೀಡಿದ್ದಾರೆ. ಕೃತಿಗಳು: ಮಂದಾರ(ಕವನಸಂಕಲನ), ಕನ್ನಡ ಮೇಘದೂತ, ಕನ್ನಡ ಕುಮಾರ ಸಂಭದ, ಪದ್ಯಾನುವಾದಗಳು, ದರ್ಶನ ಸಂಗ್ರಹ, ಸಾಂಖ್ಯಕಾರಿಕಾ, ಸಂಸ್ಕೃತ ಸಾಹಿತ್ಯ ಪ್ರವೇಶ(ಪಠ್ಯ), ಭಾಸ ಕವಿಯ ಸುಭಾಷಿತಗಳು, ...

READ MORE

Related Books