ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ವಾಚಿಕೆ

Author : ಕರೀಗೌಡ ಬೀಚನಹಳ್ಳಿ

Pages 384

₹ 200.00




Year of Publication: 2018
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560181
Phone: 205 - 23183311, 23183312

Synopsys

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಮಗ್ರ ಕೃತಿಗಳ ಒಂದು ನೋಟವನ್ನು ಈ ಕೃತಿಯಲ್ಲಿ ಕಾಣಬಹುದು. ಅವರ ಪ್ರತಿಯೊಂದು ಕಾದಂಬರಿಯ ತುಣುಕನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ. ಹುಲಿಯೂರಿನ ಸರಹದ್ದಿನಿಂದ ಆರಂಭವಾಗಿ ಮಾಯಾಲೋಕದವರೆಗೆ ಪ್ರತಿ ಕೃತಿಯ ಆಯ್ದ ಅಧ್ಯಾಯವನ್ನು ನೀಡಿದ್ದಾರೆ. 

About the Author

ಕರೀಗೌಡ ಬೀಚನಹಳ್ಳಿ
(10 September 1951)

ಕರೀಗೌಡ ಬೀಚನಹಳ್ಳಿ ಅವರು 1951 ಸೆಪ್ಟೆಂಬರ್‌ 10ರಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ವ್ಯಷ್ಟಿ-ಸಮಷ್ಟಿ ಪ್ರಬಂಧ ಮಂಡಿಸಿ  ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. .ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗದಲ್ಲಿ ಕಾರ್ಯ ನಿರ್ವಹಿಸಿದ ನಿವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಸಾರಂಗದ ನಿರ್ದೇಶಕರಾಗಿ ನಂತರ ಕುಲಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ಕನ್ನಡ ಸಾಹಿತ್ಯದೆಡೆಗಿನ ಒಲವು ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ ಮಾಡಿತ್ತು. ಇವರು ಬರೆದ ಕಥೆ, ಕವನಗಳು ತುಮಕೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯವಾಗಿವೆ. ಇವರ ಕಥೆಗಳು ...

READ MORE

Related Books