ಪುರುಷಾ ಮೃಗ

Author : ಆನಂದ (ಅಜ್ಜಂಪುರ ಸೀತಾರಾಂ)

Pages 150

₹ 50.00




Year of Publication: 2007

Synopsys

ಆರ್.ಎಲ್. ಸ್ಟೀವನ್ಸನ್ ಅವರ ಡಾ. ಜೆಕಿಲ್ ಅಂಡ್ ಹೈಡ್ ಎಂಬ ಸುಪ್ರಸಿದ್ಧ ಕೃತಿಯ ಅನುವಾದವಾಗಿದೆ ಇದು. ಕನ್ನಡದ್ದೇ ಕೃತಿ ಎನ್ನುವಷ್ಟರ ಮಟ್ಟಿಗೆ ಆನಂದ ಅವರು ಚಂದ ಅನುವಾದ ಮಾಡಿದ್ದಾರೆ.

ಲಗಾಮು ಇಲ್ಲದ ತುಂಟ ಕುದುರೆಯಂತೆ ಗೊತ್ತುಗುರಿಯಿಲ್ಲದೆ ಓಡುವ ಮಾನವನ ಮನಸ್ಸು ಮತ್ತು ಅವನು ತಾನು ಹೊರ ಜಗತ್ತಿಗೆ ಹೇಗೆ ಕಾಣಬೇಕು, ಮನಸ್ಸಿನ ಕಾಮನೆಗಳನ್ನು ಬಚ್ಚಿಟ್ಟು ಸಭ್ಯನಾಗಿ ಕಾಣಬೇಕು ಎಂಬ ಅವನ ಡಾಂಭಿಕತೆ ಇವೆರಡರ ತಾಕಲಾಟ, ಇದರಲ್ಲಿ ಅವನ ಬುದ್ಧಿಶಕ್ತಿ ಕೂಡ ಶಾಮೀಲಾಗಿ ಹೇಗೆ ಅವನ ಜೀವನವನ್ನೇ ಬಲಿತೆಗೆದುಕೊಳ್ಳುತ್ತದೆ ಎಂಬ ದಾರುಣಮಯ ಘಟನೆಗಳ ಸರಮಾಲೆ ಈ ಕೃತಿಯ ಪ್ರಮುಖ ವಸ್ತುವಾಗಿದೆ.

About the Author

ಆನಂದ (ಅಜ್ಜಂಪುರ ಸೀತಾರಾಂ)
(18 August 1902 - 17 November 1963)

’ಆನಂದ’ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಅಜ್ಜಂಪುರ ಸೀತಾರಾಂ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ಮಾಸ್ತಿಯವರ ಸಣ್ಣಕಥಾ ಪರಂಪರೆಯಲ್ಲಿ ಆನಂದರು ಹೆಜ್ಜೆಗುರುತು ಮೂಡಿಸುವ ಬರವಣಿಗೆ. ಇವರು ಜನಿಸಿದ್ದು 1902 ಆಗಸ್ಟ್‌ 18ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಜನಿಸಿದರು.  ಸೀತಾರಾಮ್ ಅವರ ಪ್ರಾರಂಭಿಕ ಶಿಕ್ಷಣ ಆಂಗ್ಲೋವರ್ನಾಕ್ಯುಲರ್ ಶಾಲೆಯಲ್ಲಿ ನಡೆಯಿತು. ಹೈಸ್ಕೂಲು ಹಾಗೂ ಜ್ಯೂನಿಯರ್ ಕಾಲೇಜು ವಿದ್ಯಾಭ್ಯಾಸ ಶಿವಮೊಗ್ಗದಲ್ಲಿ ನಡೆಯಿತು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್‌ಸಿ ಪದವಿ ಗಳಿಸಿದರು. ಕೈಲಾಸಂರವರು ಶಿವಮೊಗ್ಗದಲ್ಲಿದ್ದಾಗ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಹೈಸ್ಕೂಲಿನಲ್ಲಿ ಗುರುಗಳಾಗಿ ದೊರೆತಿದ್ದ ಎಂ.ಆರ್.ಶ್ರೀ ಮತ್ತು ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿಗಳು ಸಾಹಿತ್ಯಾಭ್ಯಾಸಕ್ಕೆ ಉತ್ತೇಜನ ...

READ MORE

Related Books