ಪುಟ ಬಂಗಾರ

Author : ಎಲ್. ಎನ್. ಮುಕುಂದರಾಜ್

Pages 102

₹ 100.00




Year of Publication: 2017
Published by: ಕಾವ್ಯಕಲಾ ಪ್ರಕಾಶನ
Address: ನಂ. 1273 7ನೇ ಅಡ್ಡರಸ್ತೆ, ಚಂದ್ರಾ ಬಡಾವಣೆ, ವಿಜಯನಗರ, ಬೆಂಗಳೂರು – 560040
Phone: 9964124831

Synopsys

ಕರ್ನಾಟಕದ ಮಾಜೀ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪನವ ನಾಯಕತ್ವ, ದಿಟ್ಟ ವ್ಯಕ್ತಿತ್ವ, ಅವರ ಜೀವನ ಕಥನಗಳನ್ನು ಸಂಗ್ರಹಿಸಿ ಅವರ ಜೀವನದ ವಿವರಗಳನ್ನು ನೀಡುವ  ’ಪುಟ ಬಂಗಾರ’.

ಬಂಗಾರಪ್ಪನವರು ಜನತೆಗೆ ಮಾಡಿದ ಸೇವೆ, ದೌರ್ಜನ್ಯ ದಬ್ಬಾಳಿಕೆಗಳ ವಿರುದ್ದ ನ್ಯಾಯಕ್ಕಾಗಿ ಹೋರಾಡಿದ ಪರಿ, ಬಡವರ ಬಂಧುವಾಗಿ ಜನರೊಂದಿಗಿದ್ದ ಅಪೂರ್ವ ಕ್ಷಣಗಳು, ರಾಜಕೀಯ, ಒಂದಿಷ್ಟು ಮಾತುಕತೆ ಇವೆಲ್ಲವನ್ನೂ  ಈ ಕೃತಿ ಒಳಗೊಂಡಿದೆ.  ಜನ ಸಹಾಯಕ್ಕಾಗಿ ಯೋಜನೆಗಳು, ಕಾರ್ಯಗಳು, ಹಾಗೂ ಜನಪರ ಕ್ರಿಯ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

ಮಂತ್ರಿಯಾಗಿ ಬಂಗಾರಪ್ಪ, ಸಾಂಸ್ಕೃತಿಕ ಒಲವುಗಳು, ಸಾಂಸಾರಿಕ ಜೀವನ, ಸಾಮಾಜಿಕ ಕಾರ್ಯಕ್ರಮಗಳು, ಮಾನವೀಯ ಮೌಲ್ಯಗಳು, ಪ್ರಶಸ್ತಿಗಳ ಹಿರಿಮೆ, ಬಡವರ ರಾಜಕಾರಣ, ವಕೀಲರಾಗಿ ಬಂಗಾರಪ್ಪ ಹೀಗೆ ಅನೇಕ ಲೇಖನಗಳ ಸಂಗ್ರಹವನ್ನು ಚಿಂತಕ, ಕವಿಯಾದ ಎಲ್. ಎನ್. ಮುಕುಂದರಾಜ್ ಪ್ರಕಟಿಸಿದ್ದಾರೆ.

 

About the Author

ಎಲ್. ಎನ್. ಮುಕುಂದರಾಜ್

ಎಲ್. ಎನ್. ಮುಕುಂದರಾಜ್  ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...

READ MORE

Related Books