`ಪುಟಾಣಿ ಪಂಟರ್ಸ್’ ಅಶ್ವಿನಿ ಶಾನಭಾಗ ಅವರ ಮಕ್ಕಳ ಕಾದಂಬರಿಯಾಗಿದೆ. ಈ ಕತೆಯಲ್ಲಿ ಎರಡು ಮುಖ್ಯವಾದ ವಿಷಯಗಳು ಎಂದರೆ ಮಕ್ಕಳು ತೋರುವ ಕುತೂಹಲ ಮತ್ತು ಸಹಾನುಭೂತಿ. ಈ ಕತೆಯಲ್ಲಿ ಬರುವ ಮೂವರು ಮುಖ್ಯ ಪಾತ್ರಗಳು - ಆರ್ಯ, ಮೀರಾ ಮತ್ತು ಅಪ್ಪು, ನಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತ ನೋಡಿರುವ ಮಕ್ಕಳನ್ನು ನೆನಪಿಸುತ್ತಾರೆ. ಅವರು ಆಡುವ ಸ್ಕೂಟರ್ ಆಟ, ಹಿರಿಯರಿಂದ ಬಚ್ಚಿಟ್ಟುಕೊಂಡು ಚಾಕಲೇಟ್ ತಿನ್ನೋದು, ಜೇಬಿನಲ್ಲಿ ಸದಾ ತಿನ್ನಲು ಏನಾದರೂ ಇಟ್ಟುಕೊಳ್ಳುವುದು, ತಮ್ಮ ಕೆಲಸ ಆಗಬೇಕು ಅಂತ ಪೋಷಕರಿಗೆ ಪೂಸಿ ಹೊಡಿಯುವುದು ಮಕ್ಕಳಿಗೆ ಇಷ್ಟವಾಗುತ್ತೆ. ಈ ಮೂವರು ಮಕ್ಕಳು ಕಾಲೋನಿಯಲ್ಲಿ ಇರುವ ದೊಡ್ಡ ಮಕ್ಕಳೊಂದಿಗೆ ಸೇರಿ ಬೆಕ್ಕಿನ ಮರಿಗಳ ಮೇಲಿರುವ ಪ್ರೀತಿಗಾಗಿ ಮಾಡುವ ಕೆಲಸಗಳು ರೋಚಕವಾಗಿವೆ. ಕತೆಯಲ್ಲಿ ಬರುವ, ಮಕ್ಕಳು ಹೆದರುವ ಶಿಸ್ತಿನ ಕರ್ನಲ್ ಅಂಕಲ್ ಪಾತ್ರ ಮನಸಲ್ಲಿ ಉಳಿಯುತ್ತೆ. ಈ ಪುಸ್ತಕದಲ್ಲಿ ಮಕ್ಕಳ ಮನಸನ್ನು ಸೆರೆಹಿಡಿಯುವಲ್ಲಿ ಲೇಖಕರು ಅದ್ಭುತ ಕೆಲಸವನ್ನು ಮಾಡಿದ್ದಾರೆ.
©2025 Book Brahma Private Limited.