ಪುತ್ರಿ ಕಾಮೇಷ್ಟಿ

Author : ವಿವೇಕಾನಂದ ಕಾಮತ್

Pages 116

₹ 100.00




Year of Publication: 2017
Published by: ಸಾಹಿತ್ಯ ಸುಗ್ಗಿ
Address: ನಂ. 40 , 1 ನೇ ಮುಖ್ಯ ರಸ್ತೆ , 2ನೇ ಹಂತ , 3ನೇ ಬ್ಲಾಕ್ , ನಾಗರಭಾವಿ , ಬೆಂಗಲೂರು - 560072
Phone: 9740066842

Synopsys

ಮೊದಲ ಮಗು ಹೆಣ್ಣು. ಎರಡನೇದು ಹೆಣ್ಣು. ಮೂರನೇದು ಕೂಡಾ ಹೆಣ್ಣು ಮಗು, ಜೊತೆಗೆ ವಿಶೇಷ ಚೇತನಳು. ಗಂಡು ಮಗುವಿನ ಮೋಹದ ಪತಿ ,ಪತ್ನಿ ಮಕ್ಕಳನ್ನು ತೊರೆದು ಹೋಗಿ ತನ್ನ ಬದುಕನ್ನು ನೋಡಿಕೊಂಡ. ಅಬಲೆಯಾದರೂ ಸೋತು ಗಂಡನನ್ನು ಅರಸಿ ಹೋಗದೇ ತನ್ನ ಬದುಕನ್ನು ಸ್ವಾವಲಂಬಿಯಾಗಿ ಕಳೆಯಲು ಹೊರಟಳು ವಸುಧಾ. ಅದನ್ನೇ ತಮ್ಮ ಮೂರೂ ಹೆಣ್ಣುಮಕ್ಕಳಿಗೆ ಕಲಿಸಿದಳು ಕೂಡಾ. ಬದುಕು ಪಥ ಬದಲಿಸಿತು. ಬಿಟ್ಟು ಹೋದ ಅಪ್ಪ, ಹೆಣ್ಣು ಮಕ್ಕಳು ಮುಖಾಮುಖಿಯಾದರು. ಜೀವನ ಹೇಗೆ ರೂಪ ತಳೆದಿತ್ತು..ಇದು ಪುತ್ರ ಅಲ್ಲ.. ಪುತ್ರಿ ಕಾಮೇಷ್ಟಿಯ ಕತೆ. ಮಂಗಳ ವಾರಪತ್ರಿಕೆ ಪ್ರಕಟಿಸಿದ ಕಾದಂಬರಿ ಇದು. ________________________________________________________________________________________________________

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books