ಪುಟ್ಟ-ಪುಟ್ಟಿಯ ಪರಿಸರ ಪಾಠಗಳು

Author : ಟಿ.ಜಿ. ಶ್ರೀನಿಧಿ

Pages 40

₹ 60.00




Year of Publication: 2020
Published by: ಇಜ್ಞಾನ ಟ್ರಸ್ಟ್‌
Address: # 203, ಶರಾವತಿ ಗೋಕುಲ, 5ನೇ ಅಡ್ಡರಸ್ತೆ, ದ್ವಾರಕಾನಗರ, ಬಿಎಸ್.ಕೆ. 3ನೇ ಹಂತ, ಹೊಸಕೇರಿಹಳ್ಳಿ, ಬೆಂಗಳೂರು-560085

Synopsys

ಲೇಖಕ ಟಿ.ಜಿ. ಶ್ರೀಧರ ಅವರು ಪರಿಸರಕ್ಕೆ ಸಂಬಂಧಿಸಿದಂತೆ ಮಕ್ಕಳಿಗಾಗಿ ಬರೆದ ಲೇಖನಗಳು ಸಂಗ್ರಹ ಕೃತಿ-ಪುಟ್ಟ-ಪುಟ್ಟಿಯ ಪರಿಸರ ಕಥೆಗಳು. ಎಳೆಯ ಮಕ್ಕಳನ್ನು ಓದುಗರಾಗಿ ಎದುರಿಗೆ ಕೂರಿಸಿಕೊಂಡು ಬರೆದಿರುವ ಈ ಕಿರುಹೊತ್ತಿಗೆಯಲ್ಲಿ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಹಂಬಲದಷ್ಟೇ ಪ್ರಾಕೃತಿಕ ಸಂಪರ್ಕದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕಾಳಜಿಯೂ ಇದೆ.

ಗೆದ್ದಲು ಹುತ್ತ, ಹಲ್ಲಿಯ ಪಾದ, ಅಂಟುಮುಳ್ಳು ಮೊದಲಾದ ನೈಸರ್ಗಿಕ ವಿಷಯಗಳು ಮಕ್ಕಳಿಗೆ ಅಚ್ಚರಿಯ ವಸ್ತುವಾಗಿರುವಂತೆ ವೈಜ್ಞಾನಿಕ ಸಂಶೋಧನೆಗಳಿಗೂ ವಸ್ತುವಾಗಿರುವುದನ್ನು ಲೇಖಕರು, ಸರಳಭಾಷೆಯಲ್ಲಿ ವಿವರಿಸಿದ್ದಾರೆ. ಬೀಚಿನಲ್ಲಿ ಪ್ರವಾಸಿಗರು ಬಿಸಾಡಿಹೋದ ಪ್ಲಾಸ್ಟಿಕ್ ಬಾಟಲುಗಳು, ಮದುವೆ ಮನೆಯ ಊಟಕ್ಕೆ ತಂದಿಟ್ಟ ಪ್ಲಾಸ್ಟಿಕ್ ಲೋಟ ಬಟ್ಟಲುಗಳು, ವಾಯುಮಾಲಿನ್ಯ, ಇ-ತ್ಯಾಜ್ಯ ಎಲ್ಲವೂ ತಾವು ಸೃಷ್ಟಿಗೊಂಡಿರುವ ಈ ಜಗತ್ತನ್ನೇ ಹೇಗೆ ನರಕವಾಗಿಸಬಲ್ಲವು ಎನ್ನುವುದನ್ನು ಮನದಟ್ಟು ಮಾಡಿಸುವ ಪ್ರಯತ್ನವೂ ಇಲ್ಲಿಯ ಬರಹಗಳಲ್ಲಿ ಕಂಡುಬರುತ್ತವೆ. ಪ್ರತಿ ಪ್ರಸಂಗದ ಕೊನೆಯಲ್ಲಿ ಕೊಟ್ಟಿರುವ ಟಿಪ್ಪಣಿ, ಅಭ್ಯಾಸ ಸೂಚಿಗಳು ಪುಸ್ತಕಕ್ಕೆ ಅಧ್ಯಯನದ ಗಾಂಭೀರ್ಯವನ್ನೂ ತಂದುಕೊಟ್ಟಿವೆ.

 

About the Author

ಟಿ.ಜಿ. ಶ್ರೀನಿಧಿ

ಟಿ.ಜಿ. ಶ್ರೀನಿಧಿ ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿ ಉದ್ಯೋಗ ಮಾಡುತ್ತಿದ್ಧಾರೆ.  ವಿಜ್ಞಾನ-ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವುದು ಇವರ  ಅಚ್ಚುಮೆಚ್ಚಿನ ಹವ್ಯಾಸ. ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಕನ್ನಡ ಜಾಲ ತಾಣ 'ಇಜ್ಞಾನ ಡಾಟ್ ಕಾಮ್' (www.ejnana.Com) ನ ರೂವಾರಿ. ನಾಲ್ಕು ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಆರು ಪುಸ್ತಕಗಳು ಈವರೆಗೆ ಪ್ರಕಟವಾಗಿವೆ. ಪ್ರಸ್ತುತ ಉದಯವಾಣಿಯಲ್ಲಿ 'ವಿಜ್ಞಾಪನೆ' ಅಂಕಣ ಪ್ರಕಟವಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ, ಉಷಾಕಿರಣ ಹಾಗೂ ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರರೂ ಆಗಿದ್ದರು. 'ಶ್ರೀನಿಧಿಯ ಪ್ರಪಂಚದಲ್ಲಿ (WWW.Srinidhi.net.in) ಬ್ಲಾಗಿಸುವುದು, ಛಾಯಾಗ್ರಹಣ, ಪ್ರವಾಸ ಹಾಗೂ ಪುಸ್ತಕಗಳ ಓದು ...

READ MORE

Excerpt / E-Books

ಅಮ್ಮ ಹೇಳಿದರು, "ಅಡಕೆ ಹಾಳೆಯ ಬಟ್ಟಲು, ಮರದ ಚಮಚ - ಇವೆಲ್ಲ ಬಳಸೋದಕ್ಕೆ ಮಾತ್ರವೇ ಅಲ್ಲ, ನೋಡೋದಕ್ಕೂ ಚೆಂದ!" "ಬಳಸಿ ಆದಮೇಲೆ ಅದನ್ನೂ ಎಸೀಬೇಕು ತಾನೇ?" ಪುಟ್ಟಿ ಕೇಳಿದಳು. "ಅದನ್ನೆಲ್ಲ ಬೇರೆಮಾಡಿ ಒಂದುಕಡೆ ಹಾಕಿ, ಅದೆಲ್ಲ ಕೊಳೆತು ಮಣ್ಣಾಗುವುದಕ್ಕೆ ಸುಮಾರು ಸಮಯ ಬೇಕು. ಇದರ ಬದಲು ನನ್ನ ಹತ್ರ ಬೇರೆಯದೇ ಐಡಿಯಾ ಇದೆ!" "ಏನಪ್ಪಾ ಅದು ಅಂಥಾ ಐಡಿಯಾ?" ಅಮ್ಮನ ಗೆಳತಿ ಕೇಳಿದರು. "ನಿನ್ನೆ ಸಂಜೆ ಐಸ್ ಕ್ರೀಮ್ ತಿನ್ನಕ್ಕೆ ಹೋಗಿದ್ವಲ್ಲ, ಅಲ್ಲಿ ಐಸ್ ಕ್ರೀಮನ್ನು ಕೋನ್ ಒಳಗೆ ಹಾಕಿ ಕೊಟ್ಟಿದ್ರು. ಐಸ್ ಕ್ರೀಮ್ ಜೊತೆ ನಾನು ಆ ಕೋನನ್ನೂ ತಿಂದುಬಿಟ್ಟೆ. ತಿಂಡಿ ತಿನ್ನೋದಕ್ಕೂ ಅಂಥದ್ದೇ ಬಟ್ಟಲು - ಚಮಚ ಎಲ್ಲ ಇದ್ರೆ ಎಲ್ಲವನ್ನೂ ಒಟ್ಟಿಗೆ ತಿಂದು ಮುಗಿಸಿ ಎದ್ದು ಹೋಗಬಹುದು. ಕಸವೂ ಆಗಲ್ಲ, ತೊಳೆಯೋ ಯೋಚನೆಯೂ ಇಲ್ಲ!"

Related Books