ಪುಟ್ಟಕ್ಕನ ಹೈವೆ

Author : ಬಿ. ಸುರೇಶ

Pages 196

₹ 315.00




Year of Publication: 2015
Published by: ಮಣಿಪಾಲ್ ಯೂನಿವರ್ಸಿಟಿ ಪ್ರೆಸ್
Address: ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್, ಎಂ.ಎ.ಎಚ್.ಎ. ಮಣಿಪಾಲ-576104

Synopsys

ಚಿತ್ರ-ಚಿತ್ರಕಥೆ ಹಾಗೂ ಚಲನಚಿತ್ರವಾಗಿಯೂ ಗಮನ ಸೆಳೆದ ಕೃತಿ-ಪುಟ್ಟಕ್ಕನ ಹೈವೆ. ನಾಗತಿಹಳ್ಳಿ ಚಂದ್ರಶೇಖರ ಅವರು ಬರೆದ ಕಾದಂಬರಿ ಆಧರಿತ ಚಿತ್ರಕಥೆ ಇದು. ಲೇಖಕ ಬಿ. ಸುರೇಶ ಅವರು ಚಲನಚಿತ್ರವನ್ನು ನಿರ್ದೇಶಿಸಿದ್ದು, 2011ರ ಮೇ ತಿಂಗಳಲ್ಲಿ ಮೊದಲು ಬಿಡುಗಡೆಯಾಗಿತ್ತು. ಹೆದ್ದಾರಿ ನಿರ್ಮಾಣಕ್ಕಾಗಿ ರೈತರ ಹೊಲಗಳನ್ನು ಖರೀದಿಸುವ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆಯುವ ರೈತರನ್ನು ಸಂಚಿಗೆ ಗುರಿಯಾಗಿಸುವುದು, ರೈತರ ನೋವುಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಈ ಚಲನಚಿತ್ರಕ್ಕೆ 2010-2011 ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ ಹಾಗೂ 4ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದಿದೆ.

About the Author

ಬಿ. ಸುರೇಶ

ರಂಗಭೂಮಿ ಕಲಾವಿದ, ನಾಟಕಕಾರ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಬಿ. ಸುರೇಶ, 1962ರಲ್ಲಿ ದಾವಣಗೆರೆಯಲ್ಲಿ ಜನಿಸಿದರು. ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ವಿಜಯಾ ಅವರ ಪುತ್ರ. ಬಿ.ಸುರೇಶ ಅವರು 1973ರಿಂದಲೇ ಬಾಲನಟರಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕಾಣಿಸಿಕೊಂಡು ಈವರೆಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಅಲ್ಲದೇ, 1976 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ದ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಿತ್ರರಂಗದ ಬದುಕು ಪ್ರಾರಂಭವಾಯಿತು. 1988 ರಲ್ಲಿ ಮಿಥಿಲೆಯ ಸೀತೆಯರು ನಿರ್ದೇಶನ ಮಾಡಿದ ಅವರು ಚಿತ್ರಕಥೆ, ಸಂಭಾಷಣೆ ಬರೆಯುತ್ತಾ 15 ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ.  ’ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ 2002-2003 ...

READ MORE

Related Books