ಪುಟ್ಟಣ ಕಣಗಾಲರ ಚಲನಚಿತ್ರಗಳು

Author : ನಾಗೇಂದ್ರ

Pages 447

₹ 315.00




Year of Publication: 2017
Published by: ಶ್ರೀ ಚೆನ್ನಕೇಶವ ಪ್ರಕಾಶನ
Address: ಬೆಂಗಳೂರು

Synopsys

ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಪುಟ್ಟಣ್ಣ ಕಣಗಾಲ ಅವರ ಚಲನಚಿತ್ರಗಳ ಮೇಲೆ ಕ್ಷಕಿರಣ ಬೀರಿದ ಕೃತಿ-ಪುಟ್ಟಣ್ಣ ಕಣಗಾಲರ ಚಲನಚಿತ್ರಗಳು. ಶರಪಂಜರ, ಗೆಜ್ಜೆಪೂಜೆಯಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ ಮೂಡಿಸುವ, ಘಟನೆಗಳನ್ನು-ಸನ್ನಿವೇಶಗಳನ್ನು ಕಲಾತ್ಮಕವಾಗಿ ಬಿಂಬಿಸಿ ನಿರ್ದೇಶಿದ್ದ ಅವರ ಚಲನಚಿತ್ರಗಳು ಸಿನಿಮಾ ಎಂಬ ಪರಿಕಲ್ಪನೆಯೂ ಮೀರಿದ ಕಲಾಕೃತಿಗಳಾಗಿವೆ. ಸಾಮಾಜಿಕ ಜಾಗೃತಿ ಉಂಟು ಮಾಡುವ, ಸಾಮಾಜಿಕ ಆತ್ಮಾವಲೋಕನವನ್ನು ಪ್ರೇರೇಪಿಸುವ ಇಂತಹ ಚಲನಚಿತ್ರಗಳನ್ನು ಕನ್ನಡ ಸಿನಿ ರಂಗಕ್ಕೆ ನೀಡಿರುವ ಪುಟ್ಟಣ್ಣ ಕಣಗಾಲರ ಸಿನಿಮಾ ಪ್ರೀತಿಯನ್ನು ಈ ಕೃತಿಯಲ್ಲಿ ಲೇಖಕ ಡಾ/. ನಾಗೇಂದ್ರ ಅವರು ಕಟ್ಟಿಕೊಟ್ಟಿದ್ದಾರೆ.

About the Author

ನಾಗೇಂದ್ರ

ಬರಹಗಾರರು, ಉಪನ್ಯಾಸಕರು ಆಗಿರುವ ಡಾ. ನಾಗೇಂದ್ರ ಅವರು ಪ್ರಸ್ತುತ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಸಿನಿಮಾ, ಮಾಧ್ಯ ನಿರೂಪಕರ ಧ್ವನಿ, ಪುಟ್ಟಣ್ಣ ಕಣಗಾಲರ ಚಲನಚಿತ್ರಗಳು, ಮಾಧ್ಯಮ ವರದಿಗಾರಿಕೆ, ಟಿ.ವಿ ವರದಿಗಾರಿಕೆ, ಮಾಧ್ಯಮ ಲೋಕ, ದೈನಿಕ ವರದಿಗಾರಿಕೆ, ಟಿವಿ ಮಾಧ್ಯಮ, ದೃಶ್ಯ ನಿರ್ಮಾಣ, ರೇಡಿಯೋ ಧ್ವನಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಇಂಗ್ಲಿಷ್ ಭಾಷೆ ಪುಸ್ತಕ ರಚನೆ ಹಾಗೂ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವ ಇವರು   ಹಿಸ್ಟರಿ ಆಫ್ ...

READ MORE

Related Books