ಪಿಗ್ಮೇಲಿಯನ್

Author : ವಿ. ಸೀತಾರಾಮಯ್ಯ

Pages 141

₹ 50.00




Year of Publication: 2007

Synopsys

19 ಮತ್ತು 20ನೇ ಶತಮಾನದಲ್ಲಿ ಬದುಕಿದ್ದ ಜಾರ್ಜ್ ಬರ್ನಾರ್ಡ್ ಷಾ ಇಂಗ್ಲಿಷ್ ಸಾಹಿತ್ಯದಲ್ಲಿ, ಅದರಲ್ಲಿಯೂ ನಾಟಕಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು. ಅವರ ಪಿಗ್ಮೇಲಿಯನ್ ನಾಟಕವನ್ನು  ಅದೇ ಹೆಸರಿನಲ್ಲಿ ವಿ. ಸೀತಾರಾಮಯ್ಯ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 

ನಾಟಕದಲ್ಲಿ ಹುಟ್ಟಿಗಿಂತ ಶಿಕ್ಷಣ ದೊಡ್ಡದು ಎಂಬ ತತ್ತ್ವ ಮುನ್ನೆಲೆಗೆ ಬಂದಿದೆ. ಹೂ ಮಾರುವವಳನ್ನು ಸುಸಂಸ್ಕೃತವಾಗಿ ರೂಪಿಸುವ ಪ್ರಯತ್ನ ಮನತಟ್ಟುತ್ತದೆ. ಪುರುಷ ಪಾತ್ರಗಳಿಗಿಂತ ಸ್ತ್ರೀಪಾತ್ರಗಳಿಗಿರುವ ಶಕ್ತಿ, ರಂಜನಾ ವಿಲಾಸ ಮೇಲುಗೈಯಾಗುವುದು ಕೃತಿಯ ವಿಶೇಷ. 

About the Author

ವಿ. ಸೀತಾರಾಮಯ್ಯ
(02 October 1899 - 04 September 1983)

ಕವಿ, ವಿದ್ವಾಂಸ, ವಿಮರ್ಶಕ,  ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು. ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ...

READ MORE

Related Books