ರಾಧೇಯ

Author : ಆದ್ಯ ರಾಮಾಚಾರ್

Pages 456

₹ 75.00




Year of Publication: 1980
Published by: ವರದರಾಜ ಪ್ರಕಾಶನ
Address: ಭೀಮರಥಿ, 114-Y, 4ನೇ ಮುಖ್ಯ ರಸ್ತೆ, 4ನೇ ಹಂತ, 7ನೇ ಬ್ಲಾಕ್, ಬನಶಂಕರಿ 3ನೇ ಹಂತ, ಬೆಂಗಳೂರು-560085
Phone: 806692139

Synopsys

ಮಹಾಭಾರತದಲ್ಲಿ ಕರ್ಣನ ಪಾತ್ರವು ಒಂದಲ್ಲಾ ಒಂದು ರೀತಿಯಲ್ಲಿ ಮಹತ್ವವನ್ನು ಪಡೆದಿದೆ. ಕರ್ಣನು ಭಾರತದ ನಾಯಕನಾಗಿ ಹಾಗು ದುರಂತ ನಾಯಕನಾಗಿ ಕಾಣುತ್ತಾನೆ, ಕರ್ಣನ ಕುರಿತು ಈ ಕೃತಿಯನ್ನು ಓದುತ್ತಾ ಹೋದಹಾಗೆ ಆ ಪಾತ್ರವು ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ. ಕೆಲವು ಕಡೆ ಈತನ ಮೇಲೆ ಸಿಟ್ಟೂ ಬರುತ್ತದೆ, ಜೂಜಿನ ಸಂದರ್ಭದಲ್ಲಿ, ದ್ರೌಪದಿಯನ್ನು ಅವಮಾನಿಸುವ ಸಂದರ್ಭದಲ್ಲಿ, ಯುದ್ಧದಲ್ಲಿ ಅಭಿಮನ್ಯುವಿನನ್ನು ಚಕ್ರವ್ಯೂಹ ಭೇದಿಸುವ ಸಮಯದಲ್ಲಿ ಆತನನ್ನು ಎಲ್ಲರೂ ಸೇರಿ ಕೊಂದು ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳುವ ಸಮಯದಲ್ಲಿ. (ಆಯ್ದ ಭಾಗ)

About the Author

ಆದ್ಯ ರಾಮಾಚಾರ್
(14 November 1924 - 04 December 2010)

ಹಿರಿಯ ಲೇಖಕ ಆದ್ಯ ರಾಮಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ. ತಂದೆ-ಸೇತುರಾಮಾ ಚಾರ್‌ ಆದ್ಯ, ತಾಯಿ-ಕಾಶೀಬಾಯಿ. ಪ್ರಾರಂಭಿಕ ಶಿಕ್ಷಣ ಲಚ್ಯಾಣ ಮತ್ತು ಭುಯ್ಯಾರ ಶಾಲೆಗಳಲ್ಲಿ ಪಡೆದ ಅವರು ಮಾಧ್ಯಮಿಕ ಶಿಕ್ಷಣ ಬಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ ಪಡೆದರು. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾಗಿದ್ದ ಅವರು ಹಲವು ಚಳವಳಿಯಲ್ಲಿ ಭಾಗಿಯಾಗಿ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ನಂತರ ಬಿಜಾಪುರದಲ್ಲಿ ಫ. ಗು. ಹಳಕಟ್ಟಿಯವರ ಮುದ್ರಣಾಲಯದಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ ಅವರು ಆನಂತರ ಮೈಸೂರಿನ ‘ಉಷಾ ಸಾಹಿತ್ಯ ಮಾಲೆ’ಯಲ್ಲಿ ಉದ್ಯೋಗಕ್ಕೆ ಸೇರಿದರು. ಆನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸಕ್ಕೆ ಸೇರಿದರು. ಈ ಸಂದರ್ಭದಲ್ಲಿ ...

READ MORE

Related Books