ರಾಘವೇಂದ್ರ ಖಾಸನೀಸ ಅವರ ಆಯ್ದ ಕಥೆಗಳು

Author : ರಾಘವೇಂದ್ರ ಖಾಸನೀಸ

Pages 108

₹ 75.00
Year of Publication: 2007
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

’ತಬ್ಬಲಿಗಳು’ ಕತೆಯ ಮೂಲಕ ಕನ್ನಡ ಓದುಗರನ್ನು ಸೆಳೆದಿರುವ ರಾಘವೇಂದ್ರ ಖಾಸನೀಸ ಅವರ ಮಹತ್ವದ ಕತೆಗಾರರಲ್ಲಿ ಒಬ್ಬರು. ಎಲೆ ಮರೆಯ ಕಾಯಿಯ ಹಾಗೆಯೇ ಬದುಕಿದ ಖಾಸನೀಸರು ತಮ್ಮ ಬರವಣಿಗೆ ಅದರಲ್ಲೂ ವಿಶೇಷವಾಗಿ ಕತೆಗಳ ಮೂಲಕ ಓದುಗರಿಗೆ ಪ್ರಿಯರಾದವರು. ಖಾಸನೀಸರ ಕತೆಗಳು ಬಿಚ್ಚಿಡುವ ಬದುಕಿನ ಸಂಗತಿಗಳು ಅದನ್ನು ಕಟ್ಟಿಕೊಡುವ ರೀತಿ ಸೊಗಸಾಗಿದೆ. ಗಣನೀಯ ಗುಣಮಟ್ಟದ ಕತೆಗಳನ್ನು ನೀಡಿರುವ ಖಾಸನೀಸರ ಆಯ್ದ ಕತೆಗಳನ್ನು ಈ ಸಂಕಲನದಲ್ಲಿ ಸಂಗ್ರಹಿಸಿ ನೀಡಲಾಗಿದೆ.

About the Author

ರಾಘವೇಂದ್ರ ಖಾಸನೀಸ
(02 March 1933 - 19 March 2007)

ರಾಘವೇಂದ್ರ ಖಾಸನೀಸ ಅವರು ಬಿಜಾಪುರ ಜಿಲ್ಲೆಯ ಇಂಡಿಯಲ್ಲಿ 1933ರ ಮಾರ್ಚ್‌ 2ರಂದು ಜನಿಸಿದರು. ಮುಂಬಯಿ ವಿಶ್ವವಿದ್ಯಾಲಯದ ಆಂಗ್ಲ ಎಂ.ಎ. ಹಾಗೂ ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೋಮ ಪದವಿ ಪಡೆದರು. ವೃತ್ತಿಯ ಆರಂಭ ಗ್ರಂಥಪಾಲಕರಾಗಿ, ಕೆಲವು ಕಾಲ ಗ್ರಂಥಾಲಯ ವಿಜ್ಞಾನದ ಬೋಧಕರೂ ಆಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕರಾಗಿ 1991ರಲ್ಲಿ ನಿವೃತ್ತಿ ಹೊಂದಿದರು. ಖಾಸನೀಸ ಅವರದು ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದವರು. ಕನ್ನಡದ ಶ್ರೇಷ್ಠ ಕತೆಗಳ ಸಾಲಿನಲ್ಲಿ ಎಂದೆಂದಿಗೂ ನಿಲ್ಲುವಂಥ 'ತಬ್ಬಲಿಗಳು’ ಖಾಸನೀಸರ ವಿರಳ ಪ್ರತಿಭೆಯ ದ್ಯೋತಕ. ಒಂದು ಕತೆಯನ್ನು ಕತೆಗಾರ ಎಷ್ಟು ಸೂಕ್ಷ್ಮವಾಗಿ ಹಿಂಜಬಲ್ಲ ಎನ್ನುವುದನ್ನು ಈ ...

READ MORE

Related Books