ರೈತ ಚಳವಳಿಗಳು

Author : ತಂಬಂಡ ವಿಜಯ್ ಪೂಣಚ್ಚ

Pages 70

₹ 40.00




Year of Publication: 1999
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಏಕೀಕರಣೋತ್ತರ ಕರ್ನಾಟಕದ ರೈತ ಚಳಿವಳಿಗೆ ಸಂಬಂಧಿಸಿದ ವಿವರಗಳು ಹಾಗೂ ಚಳವಳಿಗಳ ಹಿನ್ನೆಲೆಯಿಂದ ಹಿಡಿದು ಕರ್ನಾಟಕ ಪ್ರಾಂತ್ಯ ರೈತಸಂಘ ಮತ್ತು ಅದರ ಚಳವಳಿ, ಮಲಪ್ರಭಾ ರೈತರ ಚಳುವಳಿ, ಕರ್ನಾಟಕ ರಾಜ್ಯರೈತ ಸಂಘದ ಉದಯ ಹಾಗೂ ಚಳವಳಿಗಳ ಮಾದರಿಗಳ ಬಗ್ಗೆ ಈ ಗ್ರಂಥದಲ್ಲಿ ವಿವರವಾಗಿ ದಾಖಲಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಪ್ರಸ್ತಾವನೆ ಮತ್ತು ರೈತ ಚಳವಳಿಗಳ ಹಿನ್ನೆಲೆ ,ಕರ್ನಾಟಕ ಪ್ರಾಂತ್ಯ ರೈತಸಂಘ ಮತ್ತು ರೈತ ಚಳವಳಿ , ಮಲಪ್ರಭಾ ರೈತರ ಚಳವಳಿ, ಕರ್ನಾಟಕ ರಾಜ್ಯ ರೈತಸಂಘದ ಉದಯ ಮತ್ತು ಚಳವಳಿ ಮಾದರಿಗಳು

About the Author

ತಂಬಂಡ ವಿಜಯ್ ಪೂಣಚ್ಚ

ತಂಬಂಡ ವಿಜಯ್ ಪೂಣಚ್ಚ ಮೂಲತಃ ಮಡಿಕೇರಿಯವರು. ಮಂಗಳೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ ಫರ್ಡ್ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ನಂತರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಕುರಿತು ಬರೆದ ‘ರಾಜೇಂದ್ರನಾಮೆ ಮರು ಓದು’ ಮಹತ್ವದ ಕೃತಿಗಳಲ್ಲಿ ಒಂದು. ಹೊಸ ತಲೆಮಾರಿನ ಪ್ರಮುಖ ಇತಿಹಾಸಕಾರರಾಗಿರುವ ವಿಜಯ್ ಪೂಣಚ್ಚ, ಸದ್ಯ ಹಂಪಿ ಕನ್ನಡ ವಿ.ವಿ.ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...

READ MORE

Related Books