ರೈತನ ಬಾರುಕೋಲು

Author : ನಂಜುಂಡಾಚಾರಿ

Pages 98

₹ 80.00




Year of Publication: 2017
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಸುಪ್ರಸಿದ್ಧ ಸಮಾಜ ಸುಧಾರಕ, ಜಾತಿ ವಿನಾಶ ಚಳವಳಿಯ ಹರಿಕಾರ ಜ್ಯೋತಿಬಾ ಫುಲೆ ಬರೆದ ಕೃತಿ ’ರೈತನ ಬಾರುಕೋಲು’. ಹಾರತಿ ವಾಗೀಶನ್‌ ತೆಲುಗಿಗೆ ಅನುವಾದಿಸಿದ್ದ ಕೃತಿಯನ್ನು ನಂಜುಂಡಾಚಾರಿ ಕನ್ನಡಕ್ಕೆ ತಂದಿದ್ದಾರೆ. ಕೃತಿ ಮೊದಲು ಪ್ರಕಟವಾಗಿದ್ದು 1883ರಲ್ಲಿ. 

ಒಟ್ಟು ಐದು ಅಧ್ಯಾಯಗಳನ್ನು ಕೃತಿ ಹೊಂದಿದ್ದು ಮೇಲ್ಜಾತಿಯವರ ಸ್ವಾರ್ಥಮಯ ಆಧಿಪತ್ಯ, ಬಿಳಿಯ ನೌಕರರು ಮತ್ತು ಅವರ ಭೋಗ ಲಾಲಸೆ, ಆರ್ಯ ಬ್ರಾಹ್ಮಣರ ಚರಿತ್ರೆ, ಇಂದಿನ ವ್ಯವಸಾಯ, ರೈತರ ಸ್ಥಿತಿಗತಿಗಳು, ಶೂದ್ರ ರೈತರ ಪರವಾಗಿ ಸೂಚನೆಗಳು ಮತ್ತು ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಕೃತಿಯಲ್ಲಿ ವಿವರಗಳಿವೆ. ವರ್ತಮಾನದ ಸಾಂಸ್ಕೃತಿಕ ರಾಜಕಾರಣವನ್ನು ಅರ್ಥಮಾಡಿಕೊಳ್ಳಲು ಕೃತಿ ಉಪಯುಕ್ತವಾಗಲಿದೆ. 

ಮಧ್ಯಮವರ್ಗದ ಮತ್ತು ಸಣ್ಣ ರೈತರು ವಸಾಹತುಕಾಲದ ಮಹಾರಾಷ್ಟ್ರದಲ್ಲಿ ಎದುರಿಸಿದ ಸಂಕಷ್ಟಗಳನ್ನು ಅಂದಿನ ಗವರ್ನರ್ ಜನರಲ್‌ಗೆ ವಿವರಿಸುವ ಪ್ರಯತ್ನ ಮಾಡುತ್ತದೆ ಕೃತಿ. ಅಲ್ಲದೆ ಅಂದಿನ ರೈತಾಪಿ ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನಚಿತ್ರವನ್ನು ಈ ಕೃತಿ ಗಾಢವಾಗಿ ಕಟ್ಟಿಕೊಡುತ್ತದೆ. ಅಂದಿನ ಸಮಾಜದ ದುಸ್ಥಿತಿಯನ್ನು ಮೇಲೆ ತರುವಲ್ಲಿ ಬ್ರಿಟಿಷ್ ಆಡಳಿತಗಾರರು ಸಮರ್ಥರು ಎನ್ನುವುದನ್ನು ಅರಿತವರು ಫುಲೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಮಾಜವನ್ನು ಬ್ರಿಟಿಷರಿಗೆ ಮನವರಿಕೆ ಮಾಡುವ ಉದ್ದೇಶವನ್ನು ಕೃತಿ ಹೊಂದಿದೆ. ಹೀಗಾಗಿ ಫುಲೆ ಬದುಕಿದ್ದ ಸಾಮಾಜಿಕ ಸಂದರ್ಭವನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೂಡ ಕೃತಿ ಸಾಧನವಾಗಲಿದೆ. 

Related Books