ರಕ್ತದೊತ್ತಡ

Author : ಎನ್. ಗೋಪಾಲಕೃಷ್ಣ

Pages 98

₹ 95.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-02
Phone: 08022107704

Synopsys

ನಮ್ಮ ಆಧುನಿಕ ಜೀವನ ಶೈಲಿಯ ದುಡಿಮೆ ಮತ್ತಿತರ ಒತ್ತಡದಿಂದ ನಮ್ಮ ಆರೋಗ್ಯ ಬಹಳ ಸಂಕೀರ್ಣ, ಸೂಕ್ಷ್ಮವಾಗುತ್ತಿದೆ. ಓಡುವಂತಹ ಬದುಕಿನಲ್ಲಿ ನಮ್ಮ ಆರೋಗ್ಯದಲ್ಲಿ ಅನೇಕ ಮುಖ್ಯ ಕಾಯಿಲೆಗೆ ಜಾಗ ನೀಡುತ್ತದೆ. ಅದರಲ್ಲಿ ಅಧಿಕ ರಕ್ತದೊತ್ತಡವು ಒಂದಾಗಿದ್ದು ಅನೇಕ ದುಷ್ಪರಿಣಾಮಗಳುಂಟು ಮಾಡುತ್ತವೆ. ಇದು ಹೃದಯ, ಮೂತ್ರಪಿಂಡ, ಮಿದುಳಿನ ಕಾರ್ಯಕ್ಷಮತೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ರಕ್ತದೊತ್ತಡ ಸಹಜಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಅತ್ಯವಶ್ಯ.ಆರೋಗ್ಯಕರ ಬದುಕಿಗೆ ತಿಳುವಳಿಕೆಯ ಜತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ದೃಷ್ಟಿಯಿಂದ ಈ ಕೃತಿ ಒಂದು ಉತ್ತಮ ಕೈಪಿಡಿ. ಔಷಧಿಗಳ ಸೇವನೆ, ಆಹಾರ, ವ್ಯಾಯಾಮ, ಯೋಗ ಮುಂತಾದವುಗಳಿಂದ ನಿಯಂತ್ರಣ ಮಾಡಿಕೊಳ್ಳವುದರ ಬಗ್ಗೆ ವಿವರವಾಗಿ ಈ ಕೃತಿ ತಿಳಿಸುತ್ತದೆ.

About the Author

ಎನ್. ಗೋಪಾಲಕೃಷ್ಣ

ವಿಜ್ಞಾನ ಮತ್ತು ಆರೋಗ್ಯ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದವರಲ್ಲಿ ಪ್ರಮುಖರು ಎನ್. ಗೋಪಾಲಕೃಷ್ಣ. ಅನುವಾದದಲ್ಲೂ ಕೃಷಿ ಸಾಧಿಸಿದ್ದಾರೆ. ಆರೋಗ್ಯ ಸಂವಹನ ಕ್ಷೇತ್ರದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕನ್ನಡದಲ್ಲಿ ‘ಸಂಕ್ಷಿಪ್ತ ಕೃಷಿ-ಪರಿಸರ ಸಚಿತ್ರ ಶಬ್ದಾರ್ಥ ಕೋಶ, ನಗುವಿನಿಂದ ಆರೋಗ್ಯವೃದ್ಧಿ, ಆರೋಗ್ಯ ಮಾಹಿತಿಯ ಸದುಪಯೋಗ, ಮೂಡ್ ಸರಿಪಡಿಸುವ ಥೆರಪಿ, ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?, ಆಪ್ತಸಲಹೆ, ಆಧುನಿಕ ಜೀವನದಲ್ಲಿ ಆರೋಗ್ಯ ಸಂರಕ್ಷಣೆ ಹೇಗೆ? ಆರೋಗ್ಯ ದರ್ಶನ, ಮಿದುಳಿನ ಶಕ್ತಿ, ವಿಶ್ವದಿನ ವಿಶೇಷ ದಿನ, ಆರೋಗ್ಯ ಜ್ಞಾನ ನಿಮಗೇಕೆ ಬೇಕು? ನಿವೃತ್ತ ಜೀವನಕ್ಕೆ ಸಿದ್ಧತೆ ಹೇಗೆ?, ನೋವಿನ ಮಂಡಿ, ಆತ್ಮಹತ್ಯೆ: ...

READ MORE

Related Books