ರಕ್ತದಲ್ಲಿನ ಕೊಬ್ಬುಗಳು

Author : ವಿ ಪರಮೇಶ್ವರ

Pages 100

₹ 90.00




Year of Publication: 2016
Published by: ಕಾವ್ಯಕಲಾ ಪ್ರಕಾಶನ
Address: ನಂ. 1273, 7 ನೇ ಕ್ರಾಸ್, ಚಂದ್ರಾ ಬಡಾವಣೆ, ವಿಜಯನಗರ-560040
Phone: 9964124831

Synopsys

ಲೇಖಕ ವಿ. ಪರಮೇಶ್ವರ ಅವರ ’ರಕ್ತದಲ್ಲಿನ ಕೊಬ್ಬುಗಳು’ ಕೃತಿಯು ಆರೋಗ್ಯ ಕುರಿತ ಲೇಖನಗಳನ್ನು ಒಳಗೊಂಡಿದೆ. ಕೃತಿಗೆ ಮುನ್ನುಡಿ ಬರೆದ ಖ್ಯಾತ ಹೃದಯ ತಜ್ಞ ಡಾ. ಸಿ.ಎನ್.ಮಂಜುನಾಥ್ ‘ಆಧುನಿಕತೆ, ನಗರೀಕರಣ, ಬದಲಾದ ಜೀವನ ಶೈಲಿ, ಹೆಚ್ಚುತ್ತಿರುವ ಒತ್ತಡ, ಪರಿಸರ ಮಾಲಿನ್ಯ, ಧೂಮಪಾನ. ಮಧುಮೇಹ ಇತರೆ ಕಾರಣಗಳಿಂದ ಭಾರತ ದೇಶದಲ್ಲಿ ಹೃದಯಾಘಾತ ಮತ್ತು ಇತರೆ ಸಂಬಂಧಪಟ್ಟ ಕಾಯಿಲೆಗಳು ಗಣನೀಯವಾಗಿ ಹೆಚ್ಚುತ್ತಿದೆ. ಹಲವಾರು ದಶಕಗಳ ಹಿಂದೆ ಈ ಕಾಯಿಲೆಯು ಕೇವಲ ಶ್ರೀಮಂತರ, ನಗರವಾಸಿಗಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಎಂದು ವ್ಯಾಖ್ಯಾನ ಮಾಡಲಾಗುತ್ತಿತ್ತು. ಆದರೆ ಈಗ ಹೃದಯ ಸಂಬಂಧಿ ಕಾಯಿಲೆಯು ಹಳ್ಳಿಗಾಡಿನ ಜನರಲ್ಲಿ , ಕೂಲಿ ಕಾರ್ಮಿಕರಲ್ಲಿ ಕೂಡಾ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ನುರಿತ ಹಾಗೂ ಹಿರಿಯ ಹೃದ್ರೋಗ ತಜ್ಞರಾದ ವಿ. ಪರಮೇಶ್ವರ ಅವರು ”ರಕ್ತದಲ್ಲಿನ ಕೊಬ್ಬುಗಳು” ಕುರಿತು ಸಂಕ್ಷಿಪ್ತವಾಗಿ ಸಾಮಾನ್ಯ ಜನರಿಗೆ ಅರ್ಥವಾಗುವ ದಾಟಿಯಲ್ಲಿ ಈ ಹೊತ್ತಿಗೆಯನ್ನು ಪ್ರಕಟಿಸಿದ್ದಾರೆ. ರಕ್ತದಲ್ಲಿಯ  ಕೊಬ್ಬಿನಾಂಶವನ್ನು ಯಾವ ರೀತಿ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಆಹಾರ ಪದ್ಧತಿ ಯಾವ ರೀತಿ ಇರಬೇಕು ಮತ್ತು ಕೊಬ್ಬಿನಾಂಶ ಕಡಿಮೆ ಮಾಡುವ ಯಾವ  ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂಬ ಅಂಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇದೊಂದು ಉತ್ತಮ ಪ್ರಯತ್ನವಾಗಿದೆ ’ ಎಂದು ಪ್ರಶಂಸಿಸಿದ್ದಾರೆ.

 

About the Author

ವಿ ಪರಮೇಶ್ವರ

ಲೇಖಕ ಡಾ. ವಿ ಪರಮೇಶ್ವರ ಅವರು ಹೃದಯರೋಗ ತಜ್ಞರು. ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಜನ ಸೇವೆಯಲ್ಲಿದ್ದು, ವೈದ್ಯ ಶಾಸ್ತ್ರ ಕುರಿತು ಅನೇಕ ಲೇಖನ-ಪುಸ್ತಕಗಳನ್ನೂ ಬರೆದಿದ್ದಾರೆ. 1985 ರಲ್ಲಿ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರಾಗಿ, 1988-89 ರಲ್ಲಿ ಅಸೋಸಿಯೇಷನ್ ಆಫ್ ಫಿನಿಷಿಯನ್ಸ್ ಆಫ್ ಇಂಡಿಯಾದ ಅಧ್ಯಕ್ಷರಾಗಿ, 1994-98 ರಲ್ಲಿ, ಇಂಡಿಯನ್ ಕಾಲೇಜ್ ಆಫ್ ಫಿನಿಷಿಯನ್ಸ್ ನ ಡೀನ್ ಆಗಿ, ಅಖಿಲ ಭಾರತ ಮಟ್ಟದಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸಿದ್ದಾರೆ.  1985 ರಲ್ಲಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993 ರಲ್ಲಿ ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಮಾಸ್ಟರ್ ಟೀಚರ್ ಪ್ರಶಸ್ತಿ, ...

READ MORE

Related Books