ರಾಮಪುರದ ಗೆಳೆಯರು ಮತ್ತು ಆಜಾದ್ ನಗರದ ಆಟಗಾರರು

Author : ಅಂತಃಕರಣ

Pages 76

₹ 60.00




Year of Publication: 2014
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲಿ, ಕೋಡೂರು ಅಂಚೆ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ- 577418
Phone: 8861065161

Synopsys

‘ರಾಮಪುರದ ಗೆಳೆಯರು ಮತ್ತು ಆಜಾದ್ ನಗರದ ಆಟಗಾರರು’ ವಿದ್ಯಾಸಾಗರ ಬಾಲ ಪುರಸ್ಕಾರ ವಿಜೇತ, ಕಿಶೋರ ಸಾಹಿತಿ ಅಂತಃಕರಣ ಬರೆದ ಎರಡು ಕಾದಂಬರಿಗಳ ಸಂಕಲನ.

ಈ ಕೃತಿಗೆ ಹಿರಿಯ ಮಕ್ಕಳ ಸಾಹಿತಿ ಆನಂದ ಪಾಟೀಲರು ಬೆನ್ನುಡಿ ಬರೆದು, ‘ನಮ್ಮ ಮಕ್ಕಳು ನಮ್ಮ ಸುತ್ತಲಿನ ಪರಿಸರದಲ್ಲಿ ಏನೆಲ್ಲ ಬಯಸುತ್ತಿವೆ, ಏನೆಲ್ಲಾ ತೊಡೆದು ಹಾಕಲು ಕನಸು ಕಾಣುತ್ತಿವೆ, ಎಷ್ಟು ಬೇಗ ಅಂದರೆ ಅಷ್ಟು ಬೇಗ ಆಗಿಬಿಡಬೇಕು ಎಲ್ಲ ಅನ್ನುವ ಆವೇಗಗಳು ವಿಶೇಷವಾಗಿರುತ್ತವೆ. ಈ ಎರಡೂ ಕಾದಂಬರಿಗಳಲ್ಲಿ ಇದೇ ಕಾಣುತ್ತದೆ. ಆಗಬೇಕಾದ್ದು ಆಗಿಬಿಡಬೇಕು, ಅದು ಆದಷ್ಟೂ ಅದಕ್ಕೆ ನಾವು ದೊಡ್ಡವರಾದಂತೆ ನಮ್ಮ ಕಾಲುಗಳಿಗೆ ತೊಡಕುವ ತೊಡರುಗಳು ನಮ್ಮನ್ನು ಒಂದೊಂದು ಹೆಜ್ಜೆ ಇಡಲೂ ಯೋಚನೆಗೆ ತಳ್ಳುತ್ತವೆ. ಏನು ಮಾಡುವುದು, ಏನು ಮಾಡುವ ಹಾಗಿಲ್ಲ. ಈ ಹುಡುಗನ ಕನಸುಗಳನ್ನು ಕೇಳುತ್ತಲಾದರೂ ಸುಖಿಸೋಣ ಎನ್ನುತ್ತಾರೆ. ’

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books