ರಾಮಾಯಣ ವಿಷವೃಕ್ಷ

Author : ಬಂಜಗೆರೆ ಜಯಪ್ರಕಾಶ

Pages 134

₹ 75.00




Year of Publication: 2010
Published by: ಲಂಕೇಶ್ ಪ್ರಕಾಶನ

Synopsys

ತೆಲುಗಿನ ಖ್ಯಾತ ಸಾಹಿತಿ ವಿಶ್ವನಾಥ ಸತ್ಯನಾರಾಯಣ ಅವರು ಬರೆದ  ’ರಾಮಾಯಣ ಕಲ್ಪವೃಕ್ಷಮ್’ಎಂಬ ಕೃತಿಗೆ ಉತ್ತರವಾಗಿ ಮುಪ್ಪಾಳು ರಂಗನಾಯಕಮ್ಮನವರ ’ರಾಮಾಯಣ ವಿಷವೃಕ್ಷಮ್’ ಎಂಬ ಗ್ರಂಥ ಆಧರಿಸಿದ ಬಂಜಗೆರೆ ಜಯಪ್ರಕಾಶ ರಚಿಸಿದ ಕೃತಿಯಿದು. ಮೂರು ಸಂಪುಟಗಳಲ್ಲಿ ಇರುವ ರಾಮಾಯಣ ವಿಷವೃಕ್ಷಮ್ ಕೃತಿಯು ತೆಲುಗು ಸಾಹಿತ್ಯಲೋಕದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿತ್ತು. ರಂಗನಾಯಕಮ್ಮನವರ ರಾಮಾಯಣದಲ್ಲಿ ಇರುವ ಊಳಿಗಮಾನ್ಯ, ಸ್ತ್ರೀವಿರೋಧಿ, ಜಾತಿವಾದಿ, ಶೋಷಕ ಮೌಲ್ಯಗಳನ್ನು ತಮ್ಮ ಕೃತಿಯ ಮೂಲಕ ಬಿಚ್ಚಿಟ್ಟಿದ್ದರು. ಬಂಜೆಗೆರೆಯವರು ಕೇವಲ ಸಾಹಿತ್ಯದಲ್ಲಷ್ಟೇ ಅಲ್ಲದೆ ಆಚರಣೆಯಲ್ಲಿಯೂ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ದುಡಿಯುತ್ತಾ ಹೋರಾಟದ ಕುಲುಮೆಯಲ್ಲಿ ತಮ್ಮ ಲೇಖನಿಯನ್ನು ಹರಿತಗೊಳಿಸಿಕೊಂಡವರು. ರಾಮಾಯಣದ ಜನವಿರೋಧಿ ಮೌಲ್ಯಗಳನ್ನು ಹೊರಗೆಳೆಯುವುದರ ಮೂಲಕ  ಅದಕ್ಕಿದ್ದ ಚಾರಿತ್ರಿಕ ಹಿನ್ನೆಲೆಯನ್ನು ಸಮರ್ಥವಾಗಿ ವಿವರಿಸಿದ್ದಾರೆ.

ಈ ಕೃತಿಯು 1994ರಲ್ಲಿ ’ಇದೇ ರಾಮಾಯಣ’ ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು. ಅದರ ಪರಿಷ್ಕರಿಸಿದ, ತಿದ್ದು ಪಡಿದ ಆವೃತ್ತಿಯಿದು. ಇದೇ ರಾಮಾಯಣ’ವು ಪುಸ್ತಕ ರೂಪದಲ್ಲಿ ಪ್ರಕಟವಾಗುವ ಮುನ್ನ ಜಾಣಗೆರೆ ವೆಂಕಟರಾಮಯ್ಯನವರ ವಾರಪತ್ರಿಕೆ ’ಮಾರ್ದನಿ’ಯಲ್ಲಿ 14ಕಂತುಗಳಲ್ಲಿ ಧಾರಾವಾಹಿಯಾಗಿ  ಪ್ರಕಟವಾಗಿತ್ತು.

About the Author

ಬಂಜಗೆರೆ ಜಯಪ್ರಕಾಶ
(17 June 1965)

ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್ ಹುಟ್ಟಿದ್ದು ಜೂನ್ 17-1965ರಲ್ಲಿ. ಹಿಂದುಳಿದ ಬುಡಕಟ್ಟು ಜಾತಿಯ ರೈತಾಪಿ ಕುಟುಂಬದ ಹಿನ್ನೆಲೆ ಇರುವ ಬಂಜಗೆರೆ ಜಯಪ್ರಕಾಶ್ ಅವರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೋಕಿನ ಬಂಜಗೆರೆಯವರು.  ಚಳ್ಳಕೆರೆ ಚಿತ್ರದುರ್ಗಗಳಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ. 1985ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಪತ್ರಿಕೋದ್ಯಮ ಪದವಿ. 1987 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ. ಕನ್ನಡ ವಿಶ್ವವಿದ್ಯಾಲಯದಿಂದ 1999ರಲ್ಲಿ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್)ಪದವಿ. ಕಳೆದ ಎರಡು ಮೂರು ದಶಕಗಳಿಂದ ಜನಪರ ಚಳುವಳಿಗಳಲ್ಲಿ ಸಕ್ರಿಯ ಪಾತ್ರ. ಕನ್ನಡ ವಿಶ್ವವಿದ್ಯಾಲಯವು ...

READ MORE

Related Books