ರಾಂಪೂರದ ಬಕ್ಕಪ್ಪ ಮತ್ತು ಇತರರ ತತ್ವಪದಗಳು

Author : ಕೆ. ನೀಲಾ

Pages 392

₹ 72.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ಈಗಿನ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರಾಂಪುರದವನಾದ ಕವಿ ಬಕ್ಕಪ್ಪ ತನ್ನ ವಿಭಿನ್ನ- ವಿಶಿಷ್ಟ ತತ್ವಪದಗಳ ಮೂಲಕ ಹೆಸರಾದವನು. ಬಕ್ಕಪ್ಪನ ಹಾಡುಗಳು ಭಜನೆ ಪದಗಳಾಗಿ-ತತ್ವ ಹೇಳುವ ಗೀತೆಗಳಾಗಿವೆ. ಬಕ್ಕಪ್ಪನ ಹಾಡುಗಳನ್ನು ಹಿರಿಯ ಜಾನಪದ ವಿದ್ವಾಂಸರಾಗಿದ್ದ ಸೂಗಯ್ಯ ಹಿರೇಮಠ ಅವರು ಸಂಗ್ರಹಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಂಗ್ರಹಿಸಿದ್ದರು. ಬಕ್ಕಪ್ಪನ ಎಲ್ಲ ಹಾಡೂಗಳನ್ನೂ ಒಳಗೊಂಡ ಸಮಗ್ರ ಸಂಪುಟವಿದು.

About the Author

ಕೆ. ನೀಲಾ
(01 August 1966)

ಕರ್ನಾಟಕದ ಪ್ರಮುಖ ಹೋರಾಟಗಾರ್ತಿ ಕೆ. ನೀಲಾ ಅವರು ಕನ್ನಡದ ಕಥೆಗಾರರಲ್ಲಿ ಒಬ್ಬರು. ನೀಲಾ ಅವರು 1966ರ ಆಗಸ್ಟ್ 1 ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಓದು, ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇವರ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ತೊಗರಿ ಬೆಳೆಗೆ ಬೆಂಬಲ ಬೆಲೆ ಸಿಗಬೇಕೆಂದು ರೈತಪರ ಹೋರಾಟದಲ್ಲಿ ಜೈಲು ಸೇರಿದಾಗ ಬರೆದ ಬದುಕು ಬಂದೀಖಾನೆ ಕೃತಿಯು ಜೈಲಿನ ಕಥನ ಒಳಗೊಂಡಿದೆ. ಮಹಿಳೆ- ಸಮಸ್ಯೆ ಸವಾಲುಗಳು  ಪ್ರಚಾರೋಪನ್ಯಾಸ ಮಾಲೆಯ ಕಿರು ಹೊತ್ತಿಗೆ, ಜ್ಯೋತಿಯೊಳಗಣ ಕಾಂತಿ, ತಿಪ್ಪೆಯನರಸಿ ಮತ್ತು ಇತರ ಕತೆಗಳು ಎಂಬ ...

READ MORE

Related Books