ರಂಗದಿಗ್ಗಜ ಕೋಗುಳಿ ಪಂಪಣ್ಣ

Author : ಎಂ.ಎಂ. ಶಿವಪ್ರಕಾಶ

Pages 258

₹ 200.00




Year of Publication: 2020
Published by: ಅವ್ವ ಪ್ರಕಾಶನ
Address: ಪ್ರಜ್ವಲ ನಿಲಯ, ನಹರ ಕಾಲೊನಿ, ಎಂಪಿ. ಪ್ರಕಾಶ ನಗರ, ಹೊಸಪೇಟೆ-583201
Phone: 9449654489

Synopsys

ರಂಗ ದಿಗ್ಗಜ ಕೋಗುಳಿ ಪಂಪಣ್ಣ- ಲೇಖಕ ಎಂ.ಎಂ. ಶಿವಪ್ರಕಾಶ ಅವರ ಕೃತಿ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೋಗುಳಿಯವರಾದ ಪಂಪಣ್ಣ ರಂಗಕರ್ಮಿಗಳು. ಲೇಖಕ ಕಡಕೋಳ ಮಲ್ಲಿಕಾರ್ಜುನ ಅವರು ಕೃತಿಗೆ ಮುನ್ನುಡಿ ಬರೆದು ‘ ಹೆಸರಾಂತ ರಂಗನಟ, ನಾಟಕಕಾರ, ರಂಗಗಾಯಕ ಎಲ್ಲಕ್ಕೂ ಮಿಗಿಲಾಗಿ ಸಭ್ಯತೆಯ ಸಾಕಾರಮೂರ್ತಿಯಾಗಿದ್ದ ಕೋಗಳಿ ಪಂಪಣ್ಣನವರ ಬದುಕು, ಅಭಿಜಾತ ಸಾಧನೆಗಳ ಮೇಲೆ ನಿಚ್ಚಳ ಬೆಳಕು ಚೆಲ್ಲುವ ಪುಸ್ತಕವಿದು. ಅವರ ರಂಗಬದುಕು, ಸಾಂಸ್ಕೃತಿಕ ಸಾಧನೆಗಳ ನಿಖರ ಅಧ್ಯಯನ ಮತ್ತು ಬರವಣಿಗೆಗೆ ಲೇಖಕ ತೊಡಗಿರುವಾಗಲೇ ಕೋಗಳಿ ಪಂಪಣ್ಣ ತೀರಿಹೋಗುತ್ತಾರೆ. ಶಿವಪ್ರಕಾಶ ಅಷ್ಟೊತ್ತಿಗಾಗಲೇ ಪಂಪಣ್ಣನವರ ಜೀವನದ ಯಶೋಗಾಥೆ ಮನನ ಮಾಡಿಕೊಂಡಿದ್ದರಿಂದ ಅದನ್ನು ಪುಸ್ತಕ ರೂಪದಲ್ಲಿ ತರಲು ಸಾಧ್ಯವಾಗಿದೆ. ಪಂಪಣ್ಣನವರಂಥ ರಂಗಪರಂಪರೆಯ ಕೊಂಡಿಯೊಂದು ಕಳಚಿ ಬಿದ್ದಿರುವುದು ಶೋಚನೀಯ. ಲೇಖಕರು ಕಂಡ ರಂಗದಿಗ್ಗಜ ಕೋಗಳಿ ಪಂಪಣ್ಣ ಕುರಿತು ಬರೆದಿರುವುದು ಪ್ರಸ್ತುತ ಪುಸ್ತಕದ ಮೌಲ್ಯ ದ್ವಿಗುಣಗೊಳಿಸಿದೆ. ತನ್ಮೂಲಕ ಕೃತಿಗೆ ಬಹುಮುಖಿ ಮತ್ತು ಬಹುಮುಖ್ಯ ಆಯಾಮಗಳು ಲಭಿಸಿವೆ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಎಂ.ಎಂ. ಶಿವಪ್ರಕಾಶ

ಬರಹಗಾರ ಎಂ.ಎಂ.ಶಿವಪ್ರಕಾಶ ಅವರು ಜನಿಸಿದ್ದು 1968 ಜುಲೈ 1ರಂದು. ಹುಟ್ಟೂರು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲುಕಿನ ಹಿರೇಹಡಗಲಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಾಹಿತ್ಯ ಅಧ್ಯಯನ ಬರವಣಿಗೆ ಹಾಗೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ಚಂದ್ರ ಚೇತನ(ಸಂ)1992, ಕುಟುಂಬ 1993(ನವಸಾಕ್ಷರ ಮಾಲೆ), ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ(ಬದುಕು ಬರಹ)1999, ಮುತ್ಸದ್ದಿ(ಎಂ.ಪಿ.ಪ್ರಕಾಶ್ ಕುರಿತ ಪತ್ರಿಕಾ ಲೇಖನಗಳ ಸಂಗ್ರಹ)2004. ರಂಗಭಾರತಿ , ಎಂಪಿ ಪ್ರಕಾಶ್ ಸಮಗ್ರ ಲೇಖನಗಳು ಸಂಗ್ರಹ 2011, ಮುತ್ಸದ್ದಿ ಸಂಪುಟ 2 ಎಂಪಿ ಪ್ರಕಾಶ್ ಕುರಿತ ಲೇಖನಗಳು 2012, ಸಂಕಥನ 2014, ಎಂಪಿ ...

READ MORE

Related Books