ರಂಗಪ್ರಪಂಚ

Author : ಕೆ.ವಿ. ಅಕ್ಷರ

Pages 416

₹ 500.00




Year of Publication: 2018
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ನಾಗರಿಕಪೂರ್ವ ಯುಗದಿಂದ ಆರಂಭಿಸಿ, ಸಮಕಾಲೀನ ರಂಗಭೂಮಿಯವರೆಗೆ; ಅಮೆರಿಕಾದಿಂದ ಆರಂಭಿಸಿ ಚೀನಾ-ಜಪಾನುಗಳವರೆಗೆ; ಪ್ರಪಂಚದ ವಿವಿಧ ಕಾಲ-ದೇಶಗಳ ರಂಗಸಾಧನೆಗಳನ್ನು ಪರಿಚಯಿಸುವ ಪ್ರಯತ್ನವಾಗಿ  ’ರಂಗಪ್ರಪಂಚ’ ಕೃತಿ ಹೊರಬಂದಿದೆ.

ಆಸಕ್ತ ಓದುಗ ಮತ್ತು ಅಭ್ಯಾಸಾಕಾಂಕ್ಷಿ ವಿದ್ಯಾರ್ಥಿ ಈ ಇಬ್ಬರನ್ನೂ ಗಮನದಲ್ಲಿಟ್ಟುಕೊಂಡು ರಚಿತವಾದ ಈ ಪುಸಕದಲ್ಲಿ ಪ್ರತಿಯೊಂದು ರಂಗಭೂಮಿಯ ಉದ್ದೇಶ, ಸಂದರ್ಭ, ರಂಗಮಂದಿರ, ರಂಗಸಜ್ಜಿಕೆ, ಸಂಘಟನೆ, ಅಭಿನಯ, ರಂಗತಂತ್ರಗಳು, ಮೀಮಾಂಸೆ ಮತ್ತು ನಾಟಕಸಾಹಿತ್ಯ ಹೀಗೆ ಈ ಎಲ್ಲ ವಿಷಯಗಳನ್ನು ಪರಿಚಯಿಸುವ ಜತೆಗೆ ಆಯಾ ರಂಗಭೂಮಿಯನ್ನು ಅದರ ಸಾಮಾಜಿಕ-ಸಾಂಸ್ಕ ತಿಕ ಹಿನ್ನೆಲೆಯಲ್ಲಿ ಕೂರಿಸುವ ಪ್ರಯತ್ನವನ್ನೂ ಮಾಡಲಾಗಿದೆ.

ರಂಗಪ್ರಪಂಚ ತನ್ನ ಗುರಿ ಸಾಧಿಸಿದೆ. ಕನ್ನಡದ ವಿಚಾರವಂತ ಸಾಮಾನ್ಯ ಓದುಗನಿಗೋ ವಿದ್ಯಾರ್ಥಿಗೋ ಎಷ್ಟು ಬೇಕೋ ಅಷ್ಟನ್ನೇ ಇಲ್ಲಿ ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ರಂಗಕರ್ಮಿಗಳಿಗಂತೂ ಇದೊಂದು ರನ್ನಭಂಡಾರವೇ ಆಗಿದೆ. ಇದೀಗ ಹಳ್ಳಿಪಳ್ಳಿಗಳಲ್ಲಿಯೂ ಆ ಬೀದರಿನಿಂದ ಈ ಸುಳ್ಯದವರೆಗೂ ರಂಗೋತ್ಸಾಹಿಗಳು ತುಂಬಿ ತುಳುಕುತ್ತಿರುವಾಗ ಅವರಿಗೆ ಸ್ವಸ್ಥಾನ ಪರಿಜ್ಞಾನ ಮೂಡಿಸಲು ಈ ಗ್ರಂಥ ಉಪಕಾರ ಮಾಡೀತು.ಕು.ಶಿ. ಹರಿದಾಸಭಟ್ಟ (ಉದಯವಾಣಿ - ೨೬ ನವೆಂಬರ್ ೧೯೯೪) ಈ ಪುಸ್ತಕದಲ್ಲಿ ನಿರೂಪಿತವಾದ ಇತಿಹಾಸ ಉಲ್ಲಾಸದಾಯಕವಾಗಿದೆ. ಅದರ ವ್ಯವಸ್ಥೆಯಲ್ಲಿಯೇ ಒಂದು ಸೊಗಸಿದೆ; ವಿನ್ಯಾಸದಲ್ಲಿ ವೈವಿಧ್ಯವಿದೆ. ಕೆಲವು ಇತಿಹಾಸ ನಿರೂಪಣೆಗಳಲ್ಲಿ ಕಣ್ಣುಪಟ್ಟಿ ಕಟ್ಟಿಕೊಂಡ ಏಕಮುಖತೆ ಇರುತ್ತದೆ. ಅಕ್ಷರರ ಬರವಣಿಗೆ ಆ ತೆರನಾದುದಲ್ಲ. ಇತಿಹಾಸವನ್ನು ಸಮಗ್ರ ದೃಷ್ಟಿಯಿಂದ ಪರಿಶೀಲಿಸುವ ಅವರ ಪ್ರಯತ್ನ ಆಕರ್ಷಕವಾಗಿದೆ. 

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books