ರಂಗಜಂಗಮ

Author : ಜಯಪ್ರಕಾಶ ಮಾವಿನಕುಳಿ

Pages 244

₹ 100.00




Year of Publication: 2003
Published by: ಸ್ಫಟಿಕ ಪ್ರಕಾಶನ
Address: ಮಾವಿನಕುಳಿ ಹೌಸ್, ಮೂಡಬಿದ್ರಿ- 574197

Synopsys

‘ರಂಗಜಂಗಮ’ ರಂಗಕರ್ಮಿ ಬಿ.ವಿ.ಕಾರಂತ ಅವರ ಸ್ಮರಣ ಸಂಪುಟ. ಈ ಕೃತಿಯನ್ನು ಲೇಖಕ ಡಾ. ಜಯಪ್ರಕಾಶ ಮಾವಿನಕುಳಿ ಅವರು ಸಂಪಾದಿಸಿದ್ದಾರೆ. ಬಿ.ವಿ. ಕಾರಂತರನ್ನು ಹತ್ತಿರದಿಂದ ಕಂಡ ಒಡನಾಡಿಗಳ ಅತ್ಯಂತ ಸೂಕ್ಷ್ಮ ಬರಹಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ. ಬದುಕು, ರಂಗಭೂಮಿ ಎಲ್ಲಾ ಕಡೆಯಲ್ಲೂ ಬಿ.ವಿ. ಕಾರಂತರ ನೆನಪುಗಳನ್ನು ಕಲೆ ಹಾಕಿ ಸುಂದರ ಸಂಕಲನವನ್ನು ಸ್ಮರಣೆಯಾಗಿ ಪ್ರಕಟಿಸಿದ್ದಾರೆ.

About the Author

ಜಯಪ್ರಕಾಶ ಮಾವಿನಕುಳಿ
(05 May 1951)

ಸಾಹಿತಿ ಜಯಪ್ರಕಾಶ ಮಾವಿನಕುಳಿ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕೃಷಿಯ ಜೊತೆಗೆ ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ ಮತ್ತು ರಂಗಭೂಮಿ ಚಲನಚಿತ್ರ ನಟರಾಗಿಯೂ ಖ್ಯಾತಿ ಗಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಹಲವು ನಾಟಕಗಳು, ಕಾದಂಬರಿ, ಸಣ್ಣಕತೆಗಳು, ಕಾವ್ಯ ಮತ್ತು ಇತರರೊಡನೆ ಹಲವು ಕೃತಿಗಳ ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ನೀಡಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 'ಪೊಲಿಟಿಕ್ಸ್ ಆ್ಯಂಡ್ ಕಲ್ಚರ್' ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ...

READ MORE

Related Books