ರಸದಾಳಿ

Author : ಸಿ.ಕೆ ನಾವಲಗಿ

Pages 100

₹ 69.00




Year of Publication: 2008
Published by: ಕನಕ ಸಾಹಿತ್ಯ ಪ್ರತಿಷ್ಠಾನ
Address: ಸಂಜೀವಿನಿ ನಗರ, ಹೆಗ್ಗನಹಳ್ಳಿ, ಬೆಂಗಳೂರು

Synopsys

`ರಸದಾಳಿ' ಕೃತಿಯು ಲೇಖಕ ಡಾ. ಸಿ.ಕೆ. ನಾವಲಗಿ ಅವರ ವಿಮರ್ಶಾ ಲೇಖನಗಳ ಸಂಕಲನ. ನಡುಗನ್ನಡ ಸಾಹಿತ್ಯ ಮತ್ತು ಸಾಮಾಜಕ ಪ್ರಸ್ತುತತೆ, ಕನ್ನಡ ಕಥನಗೀತೆ: ಒಂದು ವಿವೇಚನೆ, ಆನಂದಕಂದರ ನನ್ನ ನೆನಪುಗಳು: ಒಂದು ಅವಲೋಕನ, ತೆರೆ ಸರಿದಾಗ: ಒಂದು ಆತ್ಮಕಥನ ರೂಪದ ಇತಿಹಾಸ, ಪುಸ್ತಕ ವಿಮರ್ಶೆ 1-2, ಮುನ್ನುಡಿ 1-2, ಋಣ: ಒಂದು ಅವಲೋಕನ, ಸಮಾಜದಲ್ಲಿ ಸಹಕಾರದ ಮಹತ್ವ, ವಂದೇಮಾತರಂ ಭಾರತದ ಐಕ್ಯಮಂತ್ರ! ಹಾಗೂ ಸಿ.ಕೆ.ಎನ್‌ ಅವರ ಈವರೆಗಿನ ಕೃತಿಗಳ ವಿಮರ್ಶೆಗಳು ಈ ಕೃತಿಯಲ್ಲಿ ಒಳಗೊಂಡಿವೆ. 

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books