ರಸಮಯ ಸಾವಯವ

Author : ಲಕ್ಷ್ಮೀ ಮಚ್ಚಿನ

Pages 76

₹ 30.00




Year of Publication: 2010
Published by: ಸಾವಯವ ಗ್ರಾಮ ಯೋಜನೆ
Address: ಕಡಿರುದ್ಯಾವರ, ಬೆಳ್ತಂಗಡಿ

Synopsys

ಕೃಷಿ ಸಾಂಪ್ರದಾಯಕತೆಯಿಂದ ಆಧುನಿಕ ಮತ್ತು ವೈಜ್ಞಾನಿಕವೆಂಬ ಆಶಯದೊಂದಿಗೆ ಪರಿವರ್ತನೆಗೆ ದೃಷ್ಟಿ ಹರಿಸಿತು. ರಸಗೊಬ್ಬರದ ಬಳಕೆಗೆ ಪ್ರಚಾರ ಆರಂಭವಾಯಿತು. ಯಾವುದೇ ವಿಜ್ಞಾನದ ಆವಿಷ್ಕಾರವನ್ನು ದೀರ್ಘಕಾಲ ಸಂಶೋಧನೆಗೊಳಪಡಿಸದೆ ಒಪ್ಪಿಕೊಳ್ಳುವುದು ಸೂಕ್ತವಲ್ಲವೆಂಬ ಜ್ಞಾನ ಇಂದು ಮೂಡಿಬಂದಿದೆ. ಮನುಷ್ಯನ ಹಂಬಲ ಹೆಚ್ಚಾದಂತೆ ಪ್ರಕೃತಿಯೊಡನೆ ರಾಜಿ ಮಾಡಿಕೊಳ್ಳಬೇಕಾದ, ಪ್ರಕೃತಿಯನ್ನೇ ಬದಲು ಮಾಡಬೇಕಾದ ಅನಿವಾರ್ಯತೆ ಒದಗಿದಾಗ ಶರಣು ಹೋದದ್ದು ರಾಸಾಯನಿಕ ಕೃಷಿಗೆ, ನೀರಾವರಿ ಪದ್ಧತಿಗಳಿಗೆ, ನಿರ್ದಿಷ್ಟ ಬೆಳೆ ಮಾಡುವ ಗ್ರೋ ಮೋರ್ -ಡ್ ಕೃಷಿಗೆ, ತೀವ್ರ ಸ್ವರೂಪದ ಬೇಸಾಯಕ್ಕೆ. ಇದರಿಂದಾಗಿ ಭೂಮಿ ತಾಯಿ ನಲುಗತೊಡಗಿದಳು. ಜೊತೆಗೆ ಜಾನುವಾರುಗಳ ಮೇಲಿನ ನಿರ್ಲಕ್ಷ್ಯ, ಅವ್ಯಾಹತ ಗೋಹತ್ಯೆ ನಗರೀಕರಣದ ದುಷ್ಪರಿಣಾಮದಿಂದಾಗಿ ಭೂಮಿಗೆ ದೊರೆಯಬೇಕಾದ ಜೈವಿಕ ಶಕ್ತಿ ದೊರೆಯದೇ ಭೂತಾಯಿ ಮತ್ತೊಮ್ಮೆ ಬಂಜೆತನದ ಲಕ್ಷಣಗಳನ್ನು ತೋರಿಸತೊಡಗಿದ್ದಾಳೆ. ಆದರೆ ಈ ಬಾರಿಯ ಬಂಜೆತನ ತಾತ್ಕಾಲಿಕವಾಗಿ ಅಲ್ಲ ಶಾಶ್ವತವಾಗಿ ಆಗಬಹುದೆಂಬ ಭಯವೇ ಕೃಷಿಕರನ್ನು, ಸರಕಾರಗಳನ್ನು, ವಿಜ್ಞಾನಿಗಳನ್ನು ತೀವ್ರ ಆತಂಕಕ್ಕೆ ಗುರಿಮಾಡಿದೆ.

ಇದರ ಪರಿಣಾಮವೇ ಸಾವಯವ ಪ್ರಯೋಗಗಳು, ರಾಸಾಯನಿಕ ಬೇಡ, ಸಾವಯವ ಇರಲಿ ಎಂದಾಕ್ಷಣ ಸಮಸ್ಯೆಗೆ ಪರಿಹಾರ ದೊರೆಯಲಾರದು. ಐಹಿಕ ಸಂಪತ್ತು ಹೆಚ್ಚಬೇಕೆಂಬ ಆಸೆ ರೈತರಿಗಿಲ್ಲವೇ? ಸಾವಯವ ಎಂಬ ಆಧ್ಯಾತ್ಮದಲ್ಲಿ ಇದು ದೊರೆಯಲಾರದೆಂಬ ನಿಲುವಿನಿಂದ ರಾಸಾಯನಿಕದತ್ತ ಹೊರಟವರ ಮನಃ ಪರಿವರ್ತನೆಯೂ ಆಗಬೇಕಾಗಿದೆ. ಇದನ್ನರಿತ ಸರಕಾರ ರಾಜ್ಯದ ವಿವಿಧೆಡೆಗಳಲ್ಲಿ ಸಾವಯವ ಗ್ರಾಮ ಸೃಷ್ಟಿಸುವ ಕಾರ್ಯಕ್ಕೆ ಹಣ ಒದಗಿಸಿ ಇದರ ಪ್ರಚಾರಕ್ಕೆ ಸ್ವಯಂಸೇವಾ ಸಂಸ್ಥೆಗಳನ್ನು ಬಳಸಿ ಭೂತಾಯಿಗೆ ಬೆಂಬಲವನೀವ ಕಾರ್ಯಕ್ರಮವನ್ನು ಹಮ್ಮಿಕೊಂಡದ್ದು, ಈ ಸಹಸ್ರಮಾನದ ಪ್ರಥಮ ಪರಿವರ್ತನೆಯ ಸೂಚನೆ. ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮವನ್ನು ಕೃಷಿ ಇಲಾಖೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಪಾಲ್ಗೊಳ್ಳುವಿಕೆಯಿಂದ ಸಂಪನ್ನಗೊಳಿಸಿದ ಸಾವಯವ ಗ್ರಾಮ ಯೋಜನೆಯ ಹಿಂದು - ಮುಂದುಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಅತ್ಯಂತ ಸರಳ ಭಾಷೆಯಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಸಾವಯವದ ಸೊಬಗನ್ನು, ಪ್ರಯೋಗದ ವಿವರಗಳನ್ನು ನೀಡಿರುವ ಲೇಖಕ ಲಕ್ಷ್ಮೀ ಮಚ್ಚಿನ ಇವರು ಅಭಿನಂದನಾರ್ಹರು. ಇವರ ಭಾಷೆ ಸುಂದರವಾಗಿದೆ. ಇದರಲ್ಲಿ ಲೇಖಕರ ಅಧ್ಯಯನಶೀಲತೆ, ಅನುಭವ ವಿವರಿಸುತ್ತದೆ

About the Author

ಲಕ್ಷ್ಮೀ ಮಚ್ಚಿನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ  ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...

READ MORE

Related Books