ರಸ್ತಾಪುರ ಭೀಮಕವಿಯ ಶಂಕರ ಕೈವಲ್ಯ ಕಲ್ಪದ್ರುಮ

Author : ಶಾಂತಪ್ಪ ಎನ್. ಡಂಬಳ

Pages 220

₹ 200.00




Year of Publication: 2013
Published by: ಸಿದ್ಧಲಿಂಗ ಪ್ರಕಾಶನ
Address: ಸೂಪರ್ ಮಾರ್ಕೆಟ್, ಕಲಬುರಗಿ.

Synopsys

ಲೇಖಕ ಡಾ. ಶಾಂತಪ್ಪ ಎನ್. ಡಂಬಳ ಅವರ ಸಂಪಾದಿತ ಕೃತಿ-ರಸ್ತಾಪುರದ ಭೀಮಕವಿಯ ಶಂಕರ ಕೈವಲ್ಯ ಕಲ್ಪದ್ರುಮ. ಸುರಪುರ ಸಂಸ್ಥಾನದಲ್ಲಿ ಆಶ್ಥಾನ ಕವಿಯಾಗಿದ್ದ ಎನ್ನಲಾದ ರಸ್ತಾಪುರದ ಭೀಮಕವಿಯು ಹಾಲು ಮತೋತ್ತೇಜಕ ಪುರಾಣ, ಶ್ರೀ ದೋರನಹಳ್ಳಿ ಮಹಾಂತೇಶ್ವರ ಪುರಾಣ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಆ ಪೈಕಿ ಶಂಕರ ಕೈವಲ್ಯ ಕಲ್ಪದ್ರುಮ ಸಹ ಒಂದು. ರಸ್ತಾಪುರದ ಭೀಮಕವಿಯ ಕುರಿತು ಸಂಶೋಧನಾ ಅಧ್ಯಯನದ ವಿದ್ಯಾರ್ಥಿಗಳಿಗೆ ಈ ಕೃತಿ ಆಕರ ಗ್ರಂಥವಾಗಿದೆ.

About the Author

ಶಾಂತಪ್ಪ ಎನ್. ಡಂಬಳ
(22 July 1972)

ಡಾ. ಶಾಂತಪ್ಪ ಎನ್. ಡಂಬಳ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ (ಜನನ: 22-07-1972) ತಾಲೂಕಿನ ಮಳ್ಳಿ ಗ್ರಾಮದವರು. ಕರ್ನಾಟಕ ವಿ.ವಿ.ಯಿಂದ ಬಿ.ಎ, ಗುಲಬರ್ಗಾ ವಿ.ವಿ.ಯಿಂದ ಸ್ನಾತಕೋತ್ತರ ಎಂ.ಎ, ಬಿ.ಈಡಿ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು: ಒಂದು ಅಧ್ಯಯ” ವಿಷಯವಾಗಿ ಎಂ.ಫಿಲ್,  ರಸ್ತಾಪುರದ ಭೀಮಕವಿ ಹಾಗೂ ಅವರ ಕೃತಿಗಳು: ಒಂದು ಅಧ್ಯಯನ’ ವಿಷಯವಾಗಿ ಪಿ.ಎಚ್.ಡಿ ಪಡೆದಿದ್ದಾರೆ.  ಕೃತಿಗಳು: ರಸ್ತಾಪೂರ ಭೀಮಕವಿ ವಿರಚಿತ ದೋರನಹಳ್ಳಿ ಶ್ರೀ ಮಹಾಂತೇಶ್ವರ ಪುರಾಣ (ಸಂಪಾದನೆ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಮದುವೆ: ಒಂದು ಜನಪದೀಯ ಅಧ್ಯಯನ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು, ರಸ್ತಾಪುರದ ಭೀಮಕವಿ (ಸಂಶೋಧನಾ ...

READ MORE

Related Books