ರವೀಂದ್ರನಾಥ ಠಾಕೂರ್ ರವರ ಸಾಧನಾ (ಜೀವನ ಸಾಕ್ಷಾತ್ಕಾರ)

Author : ಮಹಿಪಾಲ ದೇಸಾಯಿ

Pages 160

₹ 135.00

Buy Now


Year of Publication: 2015
Published by: ಕಾಮಧೇನು ಪುಸ್ತಕ ಭವನ
Address: #5/1 ನಾಗಪ್ಪಬೀದಿ, ಶೇಷಾದ್ರಿಪುರ, ಬೆಂಗಳೂರು- 560020
Phone: 9449446328

Synopsys

ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠಾಗೋರ್ ಅವರ ಜೀವನ ಗಾಥೆ ಹಾಗೂ ಸಾಹಿತ್ಯ ಸಾಧನೆ ಕುರಿತ ಗ್ರಂಥ-ಸಾಧನಾ. ಸ್ವತಃ ರವೀಂದ್ರನಾಥರೇ ಬರೆದ ಆತ್ಮಕಥೆ. ಈ ಕೃತಿಯನ್ನು ಮಹಿಪಾಲ ದೇಸಾಯಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕವಿಯ ಅಂಕಿತನಾಮ ಗುರುದೇವ. ಇವರ `ಜನ ಗಣ ಮನ` ಭಾರತದ ರಾಷ್ಟ್ರ ಗೀತೆಯಾಗಿದ್ದರೆ, `ಅಮರ್ ಶೋನರ್ ಬಾಂಗ್ಲಾ` ಇದು ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ. ಭಾರತ ಸಾಹಿತ್ಯದ ಸಾಂಪ್ರದಾಯಿಕತೆಯನ್ನು ದಾಟಿ ವಿನೂತನವಾದ ವೈಚಾರಿಕ ಸಂಪ್ರದಾಯವೊಂದನ್ನು ನಿರ್ಮಿಸಿದ ಕೀರ್ತಿ ರವೀಂದ್ರನಾಥರಿಗೆ ಸೇರಿದ್ದು.

ಗೀತಾಂಜಲಿ ಸಂಕಲನದಲ್ಲಿಯ ಇವರ ಗೀತೆಗಳು ಪ್ರಕೃತಿ-ಸೌಂದರ್ಯ, ಜೀವನ ಮೌಲ್ಯಗಳು, ಆದರ್ಶಗಳನ್ನು ಎತ್ತಿ ಹಿಡಿದು, ಓದುಗನ ಮನದಲ್ಲಿ ಪರಿಶುದ್ಧತೆಯ ಭಾವವನ್ನು ತುಂಬುತ್ತವೆ. ವಿಶ್ವ ಮಾನವ ಸಂದೇಶದೊಂದಿಗೆ ಬದುಕಿದ ಅವರ ಜೀವನ ಹಾಘೂ ಸಾಹಿತ್ಯದಲ್ಲಿಯೂ ಇದೇ ಮೌಲ್ಯವನ್ನು ಸಾರಿದ ಅವರ ಸಂದೇಶ ಸಕಲ ಜೀವರಾಶಿಗೂ ಪ್ರೇಮದಿಂದ ಕಾನುವಂತೆ ಪ್ರೇರೇಪಿಸುವಂತದ್ದಾಗಿದೆ.

About the Author

ಮಹಿಪಾಲ ದೇಸಾಯಿ

ಮಹಿಪಾಲ ದೇಸಾಯಿ ಅವರು ಉತ್ತಮ ಅನುವಾದಕರು. ಅವರು ಬೆಂಗಳೂರು ನಿವಾಸಿ. ನಿವೃತ್ತ ಜಿಲ್ಲಾ ನ್ಯಾಯಾಧೀಶರು. ಕರ್ನಾಟಕ ರಾಜಭಾಷಾ(ವಿಧಾಯೀ) ಆಯೋಗದ ಮಾಜಿ ಅಧ್ಯಕ್ಷರು. ಕೃತಿಗಳು: ರವೀಂದ್ರನಾಥ ಠಾಕೂರರ ಗೀತಾಂಜಲಿ, ಆತ್ಮಕಥೆ  ಹಾಗೂ ಸಾಧನಾ ಸೇರಿದಂತೆ ಖಲೀಲ್  ಗಿಬ್ರಾನರ ಪ್ರವಾದಿ ಹೀಗೆ ಮಹತ್ವದ ಕೃತಿಗಳನ್ನು ಅನುವಾದಿಸಿದ್ದಾರೆ.   ...

READ MORE

Related Books