ರೆಕ್ಕೆ ಇದ್ದರೆ ಸಾಕೆ

Author : ಸಂತೋಷ್ ರಾವ್ ಪೆರ್ಮುಡ

Pages 208

₹ 190.00




Year of Publication: 2022
Published by: ಅಚಲ ಪ್ರಕಾಶನ
Address: # 10 ನೆಲಮಹಡಿ, 2ನೇ ಮುಖ್ಯರಸ್ತೆ, ವಜರಾಹಳ್ಳಿ, ಭೈರವೇಶ್ವರ ಬಡಾವಣೆ, ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

ರೆಕ್ಕೆ ಇದ್ದರೆ ಸಾಕೇ...? ಸಂತೋಷ್‌ ರಾವ್‌ ಪೆರ್ಮುಡ ಅವರ ಕೃತಿಯಾಗಿದೆ. ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಶಸ್ಸಿನ ಉತ್ತುಂಗಕ್ಕೆ ಏರಬೇಕು, ಗೆಲುವಿನ ಖುಷಿಯಲ್ಲಿ ಆಕಾಶದೆತ್ತರಕ್ಕೆ ಹಾರಬೇಕು ಎನ್ನುವ ಹಂಬಲ ಎಲ್ಲರಲ್ಲೂ ಎರುವುದು ಸಹಜ. ಆಗಸದಲ್ಲಿ ಹಾರುವುದು ಹಕ್ಕಿಯಿಂದ ಮಾತ್ರ ಸಾಧ್ಯ, ಅದೂ ರೆಕ್ಕೆ ಇದ್ದಾಗಲಷ್ಟೇ, ಹಕ್ಕಿಗೆ ಆಕಾಶದಲ್ಲಿ ಹಾರಲು ರೆಕ್ಕೆಯೇನೋ ಬೇಕು ನಿಜ. ಆದರೆ ಆ ಹಕ್ಕಿಗೆ ಆಗಸದೆತ್ತರಕ್ಕೆ ಹಾರಲು ಆಗಸವೂ (ಅವಕಾಶ) ಅಷ್ಟೇ ಮುಖ್ಯವಲ್ಲವೇ? ಇವೆಲ್ಲವೂ ಇದ್ದಾಗ ಆ ಹಕ್ಕಿಗೆ ಆಗಸದಲ್ಲಿ ಹಾರಲು ಆಸಕ್ತಿ, ಯಾ ಹಂಬಲವೇ ಇಲ್ಲದಿದ್ದರೆ? ಅದೇ ರೀತಿ ಹೂವಿನಲ್ಲಿ ಕೇವಲ ಸುವಾಸನೆ ಇದರ ಮಾತ್ರ ಸಾಕಾಗುವುದಿಲ್ಲ; ಜತೆಗೆ ಹೂವಿನ ಪರಿಮಳವನ್ನು ಎಲ್ಲೆಡೆ ಪಸರಿಸಲು ಗಾಳಿಯೂ ಅಷ್ಟೇ ಮುಖ್ಯ, ಅಂದರೆ ವ್ಯಕ್ತಿಯಲ್ಲಿ ಕೇವಲ ಜ್ಞಾನ, ಪ್ರತಿಭೆ ಮತ್ತು ಕೌಶಲಗಳಷ್ಟೇ. ಇದ್ದರೆ ಸಾಲದು: ಅವೆಲ್ಲವನ್ನೂ ಸಮರ್ಪಕವಾಗಿ ಬಳಸುವ ಅವಕಾಶಗಳೂ ಸಿಗಬೇಕು. ಅದರೊಂದಿಗೆ ಸ್ವತಃ ಆತನಲ್ಲಿ ಅವಕಾಶಗಳು ಬಳಸಿಕೊಳ್ಳುವ ಅದಮ್ಯವಾದ ಹಂಬಲ ಮತ್ತು ಆಸಕ್ತಿಯೂ ಇರಬೇಕು ಎಂಬುದನ್ನು ಈ ಕೃತಿಯು ತಿಳಿಸುತ್ತದೆ. 

About the Author

ಸಂತೋಷ್ ರಾವ್ ಪೆರ್ಮುಡ
(26 March 1983)

 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿಯ ಪೆರ್ಮುಡದ ಸಂತೋಷರಾವ್ ಎಂ.ಕಾಂ. ಪದವೀಧರರು. ಧಾರವಾಡದಲ್ಲಿ ತರಬೇತಿ ಸಂಸ್ಥೆಯೊಂದರ ಪ್ರಾಂಶುಪಾಲರು. ರಾಜ್ಯದ ವಿವಿಧ ಪತ್ರಿಕೆಗಳಿಗೆ ವಿಶೇಷವಾಗಿ ಪ್ರೇರಣಾತ್ಮಕ ಲೇಖನಗಳನ್ನು ಪ್ರಕಟಗೊಂಡಿವೆ. ವ್ಯಕ್ತಿತ್ವ ವಿಕಸನ ಮತ್ತು ಉತ್ಕೃಷ್ಟ ಜೀವನ ಶೈಲಿಗೆ ಸಂಬಂಧಿಸಿದ ಲೇಖನಗಳನ್ನು ತಮ್ಮದೇ ಆದ ಪರಿವರ್ತನಾ ಎನ್ನುವ ಪುಟದಲ್ಲಿ ಬರೆಯುತ್ತಿದ್ದಾರೆ. ಕೃತಿಗಳು : ಗೆಲುವೇ ಜೀವನದ ಸಾಕ್ಷಾತ್ಕಾರ, ಪರ್ಯಟನೆ (ಪ್ರವಾಸ ಕಥನ), ದಿಕ್ಸೂಚಿ (ವ್ಯಕ್ತಿತ್ವ ವಿಕಸನ) ಇವರ ಕೃತಿಗಳು. ...

READ MORE

Related Books