ರೆವರೆಂಡ್ ಎಫ್. ಕಿಟೆಲ್

Author : ಶ್ರೀನಿವಾಸ ಹಾವನೂರ

Pages 48

₹ 2.00




Year of Publication: 1983
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ನೃಪತುಂಗ ರಸ್ತೆ ಬೆಂಗಳೂರು 560002.

Synopsys

ರೆವರೆಂಡ್ ಎಫ್. ಕಿಟೆಲ್ ಎಂಬ ಪುಸ್ತಕವನ್ನು ಶ್ರೀನಿವಾಸ ಹಾವನೂರ ಅವರು ರಚಿಸಿದ್ದಾರೆ. ಯಾವುದಾದರೂ ಕನ್ನಡ ಶಬ್ದದ, ವಿಶೇಷತಃ ಹಳೆಯ ಶಬ್ದಗಳ ಅರ್ಥವನ್ನು ತಿಳಿದುಕೊಳ್ಳಬೇಕಾದರೆ ಕಿಟೆಲ್ ಕೋಶವನ್ನು ನೋಡುವುದು ರೂಢಿಯಾಗಿಬಿಟ್ಟಿದೆ. ವಿದ್ಯಾರ್ಥಿಗಳಿಂದ ಮೊದಲುಗೊಂಡು ದೊಡ್ಡ ದೊಡ್ಡ ಪಂಡಿತರವರೆಗೂ ಕಿಟೆಲ್ ಗೋಶವೇ ಆಧಾರ. ಕನ್ನಡೇತರರಿಗೂ ಈ ಮಹಾನ್ ಶಬ್ದ ಕೋಶವು ನೆರವಾಗಬಲ್ಲುದು. ಕಿಟೆಲ್ ಸಾಧನೆಯನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books