ರಿಚ್ ಡ್ಯಾಡ್ ಪೂರ್‍ ಡ್ಯಾಡ್

Author : ಶಿವಾನಂದ ಬೇಕಲ್

Pages 308

₹ 269.00




Year of Publication: 2020
Published by: ಮಂಜುಳ್ ಪಬ್ಲಿಷಿಂಗ್ ಹೌಸ್
Address: 2ನೇ ಮಹಡಿ, ಉಷಾ ಪ್ರೀತ್ ಟವರ್, 42, ಮಾಳ್ವಿಯಾನಗರ, ಭೂಪಾಲ-462003
Phone: +91 755 424 03

Synopsys

ರಾಬರ್ಟ್ ಟಿ. ಕಿಯೋಸಾಕಿ ಅವರ ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಕೃತಿಯನ್ನು ಲೇಖಕ ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಡವರು, ಮಧ್ಯಮ ವರ್ಗದ ಪಾಲಕರು ತಮ್ಮ ಮಕ್ಕಳಿಗೆ ಹಣದ ಮಹತ್ವ ಕುರಿತು ಹೇಳುವುದಿಲ್ಲ. ಆದರೆ, ಶ್ರೀಮಂತರು ಈ ಕೆಲಸ ಮಾಡುತ್ತಾರೆ. ಅದಕ್ಕಾಗಿ ಶ್ರೀಮಂತರ ಮಕ್ಕಳು ಹಣದ ಮಹತ್ವ ತಿಳಿದು, ಶ್ರೀಮಂತರಾಗುತ್ತಾರೆ. ಬಡವರು, ಮಧ್ಯಮ ವರ್ಗದ ಮಕ್ಕಳು ಭವಿಷ್ಯದಲ್ಲಿ ಬಡವರಾಗೇ ಉಳಿಯುತ್ತಾರೆ. ಇವರ ಬದುಕು ದುರಂತಮಯವಾಗುವುದು ತಪ್ಪುವುದಿಲ್ಲ. ಇಂತಹ ಮಹತ್ವದ ವಿಚಾರಗಳಿರುವ ಪ್ರೇರಣಾತ್ಮಕವಾದ ಬರೆಹಗಳು ಈ ಕೃತಿಯ ವೈಶಿಷ್ಟ್ಯ.ಜಗತ್ತಿನಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಮಕ್ಕಳೂ ತಮ್ಮ ಭವಿಷ್ಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಅಪ್ ಡೇಟ್ ಆಗವುದು ಸೇರಿದಂತೆ ಅಧ್ಯಾಯಗಳು ತುಂಬಾ ಪರಿಣಾಮಕಾರಿಯಾಗಿ ಮೂಡಿ ಬಂದಿವೆ.

 

About the Author

ಶಿವಾನಂದ ಬೇಕಲ್
(21 February 1951)

ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್  ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ  ಸುಧಾ, ತರಂಗ, ಪ್ರಜಾವಾಣಿ, ...

READ MORE

Related Books