ರಿಕ್ಕು ರಿಕ್ಷಣ್ಣಾ

Author : ಅನುಪಮಾ ಕೆ. ಬೆಣಚಿನಮರಡಿ

Pages 20

₹ 90.00




Year of Publication: 2022
Published by: ಹರಿವು ಬುಕ್ಸ್
Address: #67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್ ಹತ್ತಿರ ಬಸವನಗುಡಿ, ಬೆಂಗಳೂರು-560004
Phone: 8088822171

Synopsys

‘ರಿಕ್ಕು ರಿಕ್ಷಣ್ಣಾ’ ಕೃತಿಯು ಅನುಪಮಾ ಕೆ. ಬೆಣಚಿನಮರಡಿ ಅವರ ಮಕ್ಕಳ ಚಿತ್ರಕಥೆಯಾಗಿದೆ. ಸಂತೋಷ್ ಸಸಿಹಿತ್ಲು ಅವರ ಕೈ ಚಳಕದಲ್ಲಿ, ಇಲ್ಲಿನ ಚಿತ್ರಗಳು ವಿಭಿನ್ನವಾಗಿ ಮೂಡಿಬಂದಿದೆ. ಇನ್ನು ಪರಿಸರವನ್ನು ಪ್ರೀತಿಸುವ ಕತೆಗಾರ್ತಿ ಪ್ರಾಣಿ ಪ್ರಪಂಚದ ಜೊತೆಗೆ ತಮ್ಮ ಬರವಣಿಗೆಯನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮ ಬರವಣಿಗೆಯಲ್ಲಿ ರಿಕ್ಕು ಎನ್ನುವ ಆಟೋ ರಿಕ್ಷಾವನ್ನು ಸ್ನೇಹ, ಸಹಾಯದ ಮನೋಭಾವ, ಭಾವನೆಗಳಿಗೆ ಸ್ಪಂದಿಸುವ ಪಾತ್ರವನ್ನಾಗಿ ಕಟ್ಟಿಕೊಟ್ಟಿದ್ದಾರೆ. ಮಕ್ಕಳಿಗೆ ಈ ಕೃತಿಯು ಮೌಲ್ಯವನ್ನು ಹೇಳಿಕೊಡಬಲ್ಲದು. ಹಾಗೂ ಸುಲಭವಾಗಿ ಕತೆಗಳ ಅರ್ಥವನ್ನು, ಭಾಷೆಯ ಪರಿಚಯವನ್ನು ಮಾಡಬಲ್ಲದು. ಆನೆ ಹಾಗೂ ರಿಕ್ಷಾದ ನಂಟು ಭಿನ್ನವಾಗಿದ್ದು, ಮಕ್ಕಳಿಗೆ ಇಲ್ಲಿನ ಕತೆಯು ಕಾಡಿನ ಸೌಂದರ್ಯವನ್ನು ವರ್ಣಿಸಬಲ್ಲದ್ದಾಗಿದೆ.

About the Author

ಅನುಪಮಾ ಕೆ. ಬೆಣಚಿನಮರಡಿ

ಲೇಖಕಿ ಅನುಪಮಾ ಕೆ. ಬೆಣಚಿನಮರಡಿ ವೃತ್ತಿಯಿಂದ ಇಂಜಿನಿಯರ್. ಧಾರವಾಡದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಸಿಸ್ಟೆಂಟ್ ಪ್ರೋಫೆಸರ್ ಆಗಿ, ಅನೋರ ಸೆಮಿಕಂಡಕ್ಟರ್ ಲ್ಯಾಬ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯಲ್ಲಿ ಪ್ರೊಡಕ್ಟ್ ಡೆವೆಲಪ್ ಮೆಂಟ್ ಇಂಜಿನಿಯರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಂದಿನಿಂದಲೂ ಸಣ್ಣ ಪುಟ್ಟ ಕತೆ ಬರೆಯುವುದು ಹವ್ಯಾಸ ಬೆಳೆಸಿಕೊಂಡಿದ್ದ ಇವರು, ಮಕ್ಕಳ ಕಥೆಗಳು, ಪ್ರಬಂಧ, ವೈಜ್ಞಾನಿಕ, ಜೀವ ವೈಜ್ಞಾನಿಕ, ಮಹಿಳೆಯರ ಆರೋಗ್ಯ, ಸಸ್ಟೈನೆಬಲ್ ಪ್ಯಾಷನ್ ಕುರಿತ ಲೇಖನಗಳನ್ನು ಬರೆದಿದ್ದು, ಕನ್ನಡದ ಅನೇಕ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಕೃತಿಗಳು: ರಿಕ್ಕು ರಿಕ್ಷಣ್ಣ ...

READ MORE

Related Books