ರಾಕೆಟ್: ಇತಿಹಾಸ, ವಿಜ್ಞಾನ-ತಂತ್ರಜ್ಞಾನ

Author : ಟಿ. ಆರ್. ಅನಂತರಾಮು

Pages 120

₹ 135.00




Year of Publication: 2011
Published by: ಪ್ರಿಸಂ ಬುಕ್ಸ್ ಪ್ರೈ ಲಿ
Address: ನಂ. 1865, 32ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಬನಶಂಕರಿ ಎರಡನೇ ಹಂತ, ಬೆಂಗಳೂರು -560 070
Phone: 08026714108

Synopsys

‘ರಾಕೆಟ್: ಇತಿಹಾಸ, ವಿಜ್ಞಾನ-ತಂತ್ರಜ್ಞಾನ’ ಎಸ್. ಕೆ. ದಾಸ್ ಅವರ ಕೃತಿಯನ್ನು ಲೇಖಕ, ಭೂವಿಜ್ಞಾನಿ ಟಿ.ಆರ್. ಅನಂತರಾಮು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಕೆಟ್ ಕುರಿತು ಜನಸಾಮಾನ್ಯರಿಗೂ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ. ರಾಕೆಟ್‍ನ್ನು ಅನ್ವೇಷಿಸಿದವರು ಯಾರು? ಅವೇಕೆ ನಮಗೆ ಬೇಕು? ಅವು ಕಾರ್ಯ ನಿರ್ವಹಿಸುವ ಬಗೆ ಹೇಗೆ? ಇವೆಲ್ಲವನ್ನೂ ಈ ಕೃತಿ ಅರ್ಥಪೂರ್ಣವಾಗಿ ವಿವರಿಸುತ್ತದೆ. ಇಲ್ಲಿ 75 ಪ್ರಶ್ನೆಗಳ ಮೂಲಕ ರಾಕೆಟ್ ಕುರಿತ ಅನೇಕ ಮಾಹಿತಿಗಳನ್ನು ನೀವು ಸುಲಭವಾಗಿ ಅರಿಯಬಹುದು. ಸರಿಯಾದ ಪ್ರಶ್ನೆಗಳಿಗೆ ಸರಿಯಾದ ಉತ್ತರವಿರುವುದು ಈ ಕೃತಿಯ ವಿಶೇಷ. ಇದನ್ನು ಓದಿ ಅರ್ಥಮಾಡಿಕೊಳ್ಳುವುದು ಸುಲಭ. ತಾಂತ್ರಿಕ ಪದಗಳ ಗೋಜಲಿಲ್ಲ. ಸರಳ ಭಾಷೆಯಲ್ಲಿ ಅನುವಾದ ಮಾಡಿದೆ. ಅಷ್ಟೇ ಅಲ್ಲ, ಮನೆಯಲ್ಲೇ ಕೂತು ಕೆಲವು ಪ್ರಯೋಗಗಳನ್ನು ನೀವೂ ಮಾಡಬಹುದು. ಅದಕ್ಕಾಗಿಯೇ ಈ ಕೃತಿಯಲ್ಲಿ ಒಂದು ಕೊನೆಯ ಅಧ್ಯಾಯವನ್ನು ಮೀಸಲಾಗಿಟ್ಟಿದೆ. ಇದರ ಜೊತೆ ಜೊತೆಗೆ ಅಂತರಿಕ್ಷ ಯುಗದ ಮಹತ್ವ, ಹಾಗೆಯೇ ಭಾರತದ ಅಂತರಿಕ್ಷ ಕಾರ್ಯಕ್ರಮಗಳ ಕುರಿತು ಆಕರ್ಷಕ ಮಾಹಿತಿಗಳಿವೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books