ರೋಮಿಯೊ ಜೂಲಿಯಟ್

Author : ಜಿ.ಎಂ. ಕೃಷ್ಣಮೂರ್ತಿ

₹ 55.00




Year of Publication: 2017
Published by: ಸಪ್ನ ಬುಕ್ ಹೌಸ್
Address: #3 ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಶೆಕ್ಸ್ ಪಿಯರ್ ಅವರ ಹೆಸರಾಂತ ನಾಟಕ ರೋಮಿಯೊ ಜೂಲಿಯಟ್. ಅದರ ಸಾರಸಂಗ್ರಹವನ್ನು ಅಷ್ಟೇ ರಸವತ್ತಾಗಿ ಮಕ್ಕಳಿಗೆ ತಿಳಿಯುವಂತೆ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ನಾಟಕ ರೂಪದಲ್ಲಿ ನೀಡಲಾಗಿದೆ. ಶೆಕ್ಸ್ ಪಿಯರ್ ಮಕ್ಕಳ ಕಥಾಲೋಕ ಸರಣಿಯಡಿ ಈ ಕೃತಿ ಪ್ರಕಟಿಸಿದೆ. ರೋಮಿಯೊ-ಜೂಲಿಯಟ್ ಅವರ ಪರಿಶುದ್ಧ ಪ್ರೇಮದ ವಿಷಯ ವಸ್ತುವನ್ನು ಈ ನಾಟಕ ಒಳಗೊಂಡಿದೆ. ಲೇಖಕರು ಈ ನಾಟಕದ ಸಾರವನ್ನು ಕನ್ನಡದಲ್ಲಿ ನೀಡಿದ್ದಾರೆ. ಈ ಕೃತಿಯು ಮೂಲ ನಾಟಕದ ಚಿಕ್ಕವೃತ್ತಾಂತ ಎಂದೂ ಹೇಳಬಹುದು. ಈ ನಾಟಕವು ವಿಶ್ವದ ಅತಿ ಶ್ರೇಷ್ಠ ನಾಟಕ ಎಂಬ ಹೆಗ್ಗಳಿಕೆ ಪಡೆದಿದೆ. ಇದು ಪ್ರೇಮಿಗಳ ದುರಂತ ಕಥೆಯೂ ಆಗಿದೆ. ಎರಡು ಮನೆತನಗಳ ಮಧ್ಯೆ ದ್ವೇಷ ಇರುತ್ತದೆ. ಆ ಎರಡು ಮನೆತನಗಳಿಗೆ ಸಂಬಂಧಿಸಿದ ಈ ಪ್ರೇಮಿಗಳು ತಮ್ಮ ಪ್ರೇಮದಲ್ಲಿ ಯಶಸ್ವಿಯಾಗುತ್ತಾರೆ. ಆದರೆ, ಆ ಮನೆತನಗಳ ದ್ವೇಷ ಎಂದಿಗೂ ಆರುವುದಿಲ್ಲ.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books