ರೂಪ - ಸ್ವರೂಪ

Author : ರಾಜಶೇಖರ ಹಳೆಮನೆ

Pages 228

₹ 160.00




Year of Publication: 2021
Published by: ಪ್ರಿಯದರ್ಶಿನಿ ಪ್ರಕಾಶನ
Address: #138, 7ನೇ ‘ಸಿ’ ಮುಖ್ಯ ರಸ್ತೆ, ಹಂಪಿನಗರ, ಬೆಂಗಳೂರು - 560 104
Phone: 9845062549

Synopsys

`ರೂಪ- ಸ್ವರೂಪ’ ಕೃತಿಯು ರಾಜಶೇಖರ ಹಳೆಮನೆ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಇಲ್ಲಿ ಶೀರ್ಷಿಕೆಯನ್ನು ಒಪ್ಪಿಕೊಂಡು, ಮೆಚ್ಚಿಕೊಂಡು ಅದರ ಸಾಮಾಜಿಕ ಆಶಯಗಳನ್ನು, ಜೀವಪರವಾದ ತುಡಿತಗಳನ್ನು ವಿವರಿಸುವ ಗುಣವೇ ವಿಮರ್ಶೆ ಎನಿಸಿಕೊಂಡಿದೆ. ‘ವರ್ಜಿನ್ ಮೊಹಿತೊ’ ಕಥಾ ಸಂಕಲನ ಕುರಿತ ವಿಮರ್ಶೆಯನ್ನು ಇಲ್ಲಿ ಗಮನಿಸಬಹುದು. ಆರಂಭ ಹೀಗಿದೆ: “ಜಾಗತೀಕರಣದ ನಂತರ ಭಾರತ ಅಗಾಧ ಬದಲಾವಣೆಗೆ ಒಳಗಾಗಿದೆ. ಮನುಷ್ಯನಿಗೆ ಅಗತ್ಯವಿರುವ ಎಲ್ಲಾ ಕ್ಷೇತ್ರಗಳು ಸೇವಾ ಮನೋಭಾವವನ್ನು ಕಳೆದುಕೊಂಡು ಉದ್ಯಮವಾಗಿ ಮಾರ್ಪಡುತ್ತಿವೆ. ಭೋಗವೊಂದೆ ಜೀವನ ಮೌಲ್ಯ ಎಂಬ ಭ್ರಮೆಯನ್ನು ದೇಹವೊಂದೆ ಮುಖ್ಯವಾಗಿ ಅಂತಃಕರಣದ ಮನುಷ್ಯತ್ವ ಮಾಯವಾಗುತ್ತಿದೆ. ಮನುಷ್ಯ ಸಂಬಂಧಗಳಲ್ಲಿ ದೇಹದ ದಾಹ ಬೆಳೆಯುತ್ತಿದೆ. ‘ನಿಜ ಮನುಷ್ಯತ್ವ’ ಕಳೆದುಹೋಗುತ್ತಿದೆ. ಈ ಸ್ಥಿತ್ಯಂತರದಲ್ಲಿ ಪಲ್ಲಟಗೊಳ್ಳುತ್ತಿರುವ ಬದುಕಿನ ವಿನ್ಯಾಸವನ್ನು ಸತೀಶ್ ಚಪ್ಪರಿಕೆಯವರ ವರ್ಜಿನ್ ಮೊಹಿತೊ ಕಥಾ ಸಂಕಲನ ಶೋಧಿಸುತ್ತದೆ. ನೈತಿಕ ಮಾನವೀಯ ಎಳೆಗಳನ್ನು ಈ ಸಂಕಲನ ಕಟ್ಟಿಕೊಡುತ್ತದೆ. ಬದುಕು ಎಷ್ಟೇ ದುರ್ಬರ ಸ್ಥಿತಿಗೆ ಒಳಗಾದರೂ ಕರುಣೆಯ ಜಗತ್ತೊಂದು ಕೈ ಹಿಡಿಯುತ್ತದೆಂಬ ನಿಲುವು ಈ ಸಂಕಲನದ ಎಂಟು ಕತೆಗಳಲ್ಲಿದೆ”. ಈ ಕೃತಿಯ ಮತ್ತೊಂದು ವೈಶಿಷ್ಟವೆಂದರೆ ಅಷ್ಟೇನೂ ಪ್ರಸಿದ್ಧವಲ್ಲದ ಕೃತಿಗಳನ್ನೂ ವಿಮರ್ಶಿಸಿರುವುದು. ಹಿರಿ-ಕಿರಿಯರೆನ್ನದೇ ಓದುವ-ಬರೆಯುವ ಗುಣ ಒಬ್ಬ ವಿಮರ್ಶಕನಿಗೆ ಇರಬೇಕಾದ ಲಕ್ಷಣವೇ ಆಗಿದೆ. ವ್ಯಾಪಕ ಅಧ್ಯಯನ ಮತ್ತು ಶ್ರದ್ಧೆಗಳು ಇಲ್ಲಿ ಸ್ಥಾಯೀಗುಣವಾಗಿ ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ಲೇಖನದ ಹಿಂದೆಯೂ ಈ ತುಡಿತ ಸಹಜ ರೂಪದಲ್ಲಿದೆ. ಹೊಸ ತಲೆಮಾರು ಸಂಶೋಧನೆ, ವಿಚಾರವಾದ, ಸಂಸ್ಕೃತಿಯ ಚಿಂತನೆಯ ಕಡೆ ಹೆಚ್ಚು ವಾಲುತ್ತಿರುವ ಈ ಸಂದರ್ಭದಲ್ಲಿ ಕಾವ್ಯ, ಕಥನ ಕೇಂದ್ರಿತ, ಬರವಣಿಗೆಗಳು ದಿನೇ ದಿನೇ ಕಡಿಮೆಯಾಗುತ್ತಿವೆ. ಹೀಗಾಗಿ ಎಂದಿಗಿಂತಲೂ ರಾಜಶೇಖಕರರಂಥ ಚಿಂತನಶೀಲರ ಕೃತಿಗಳ ಮಹತ್ವ ಹೆಚ್ಚಿದೆ.

About the Author

ರಾಜಶೇಖರ ಹಳೆಮನೆ

ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕತೆಗಾರ ಹಾಗೂ ಅಪರೂಪದ ಒಳನೋಟಗಳುಳ್ಳ ವಿಮರ್ಶಕರು ಎಂದೇ ಪ್ರಸಿದ್ಧರು. ವಿಜಯ ಕರ್ನಾಟಕ, ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿಯು ಸಂಯೋಜಿಸಿದ ಸಮಾವೇಶದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಈ ತನಕ ಪ್ರಕಟಿಸಿದ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ 2019ನೇ ಸಾಲಿನ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸಂದಿದೆ. ...

READ MORE

Related Books