ಆರೆಸ್ಸೆಸ್ ಮತ್ತು ಬಿಜೆಪಿ ಒಂದೇ ಹಾದಿ: ಭಿನ್ನ ಶ್ರಮ

Author : ಸುರೇಶ ಭಟ್ ಬಾಕ್ರಬೈಲ್‌

Pages 204

₹ 150.00




Year of Publication: 2014
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಎ.ಜಿ. ನೂರಾನಿ ಅವರು ಬರೆದಿರುವ ’ಆರೆಸ್ಸೆಸ್ ಮತ್ತು ಬಿಜೆಪಿ ಒಂದೇ ಹಾದಿ: ಭಿನ್ನ ಶ್ರಮ’ ಕೃತಿಯನ್ನು ಕನ್ನಡಕ್ಕೆ ತಂದಿರುವುದು ಚಿಂತಕ, ಹೋರಾಟಗಾರ ಸುರೇಶ ಭಟ್ ಬಾಕ್ರಬೈಲು.

ಆರೆಸ್ಸೆಸ್‌ ಒಂದು ಸಾಂಸ್ಕೃತಿಕ ಸಂಘಟನೆ ಎನ್ನಲಾಗುತ್ತದೆ. ಆದರೆ ಅದು ಅಷ್ಟಕ್ಕೇ ಸೀಮಿತವಾಗಿ ಉಳಿದಿಲ್ಲ. ಹಾಗೆಯೇ ಆರೆಸ್ಸೆಸ್‌ ನ ರಾಜಕೀಯ ಅಂಗಸಂಸ್ಥೆಯಾದ ಬಿಜೆಪಿ ಕೂಡ ಕೇವಲ ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಇವೆರಡೂ ಸಮಾಜದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಕೃತಿಯಲ್ಲಿ ಸೂಕ್ಷ್ಮವಾಗಿ ವಿವರಿಸಲಾಗಿದೆ. ಉದ್ದೇಶ ಪೂರ್ವಕ ಅಸ್ಪಷ್ಟತೆ, ಅರ್ಧಸತ್ಯ ಅಥವಾ ಅಸತ್ಯಗಳನ್ನೇ ರಾರಾಜಿಸುತ್ತ ಸಮಾಜವನ್ನು ಮತೀಯವಾಗಿ ಈ ಎರಡೂ ಸಂಘಟನೆಗಳು ಸಂಘಟಿಸುತ್ತಿವೆ ಎಂಬ ಆತಂಕ ಲೇಖಕರದ್ದು. ಒಂದೇ ನಾಣ್ಯದ ಎರಡು ಮುಖಗಳಂತೆ ಇರುವ ಇವು ಸಮಾಜದ ಮೇಲೆ ಬೀರುವ ಪರಿಣಾಮ ದೀರ್ಘಕಾಲೀನವಾದದು ಎಂದು ಕೃತಿ ಹೇಳುತ್ತದೆ. 

About the Author

ಸುರೇಶ ಭಟ್ ಬಾಕ್ರಬೈಲ್‌

ಮಂಗಳೂರಿನವರಾದ ಸುರೇಶ ಭಟ್ ಬಾಕ್ರಬೈಲ್ ಅವರು ಸುರತ್ಕಲ್ ನ ಕೆ.ಆರ್.ಇ.ಸಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು. ಮುಂಬಯಿಯಲ್ಲಿ ವಾಣಿಜ್ಯ ನೌಕೆ, ನೌಕಾ ನಿರ್ಮಾಣ, ಡೀಸಲ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅವರು 2006ರಲ್ಲಿ ನಿವೃತ್ತರಾದರು. ನಿವೃತ್ತರಾದ ನಂತರ ಅವರು ಬರಹ ಹಾಗೂ ಮಾನವ ಹಕ್ಕು, ಕೋಮು ಸೌಹಾರ್ದ ಚಳವಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ವಿಷಯಗಳ ಬಗ್ಗೆ ಬರೆಯುವದರ ಜೊತೆಗೆ ಕೋಮುವಾದದ ವಿರುದ್ಧ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಕೇಸರಿ ಭಯೋತ್ಪಾದನೆ, ಮಂಕು ಬೂ(ಮೋ)ದಿ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಕರ್ಕರೆಯನ್ನು ಕೊಂದವರು ಯಾರು?, ಜೈಲಿನ ...

READ MORE

Related Books