
ವನಿತಾ ಅಣ್ಣಯ್ಯ ಯಾಜಿ ಅವರ ಚಿತ್ರ ಪುಸ್ತಕ ರುಚಿ. "ಪುಸ್ತಕಗಳು ಮನುಷ್ಯ ಜೀವನದ ಭಾಗವಾಗಬೇಕು ಎಂದು ಬಯಸುತ್ತೇವೆ. ಹಾಗೆ ಯೋಚಿಸಿ ನೋಡಿದರೆ ಯಾವ ಹಂತದಲ್ಲಿ ಪುಸ್ತಕಗಳು ಬದುಕಿಗೆ ಪರಿಚಯ ಪಡೆಯುತ್ತವೆ, ಎಂದರೆ, ಸ್ಪಷ್ಟ ಅಭಿಪ್ರಾಯ ಮೂಡದೇ ಅಕ್ಷರಮಾಲೆಯಿಂದ ಕಲಿತ ನೆನಪು ಮರುಕಳಿಸುತ್ತದೆ. ಮಗುವೊಂದು ಸುತ್ತಮುತ್ತದ ಸಂಬಂಧಗಳನ್ನು ಹೆಸರಿಸುವ, ವಸ್ತುಗಳನ್ನು ಗುರುತಿಸುವ, ಆ ಪದಾರ್ಥಗಳಿಗಿರುವ ಗುಣವಿಶೇಷಗಳನ್ನು ಅರಿಯುವ ವಯಸ್ಸನ್ನು ಗುರಿಯಾಗಿಸಿ ಈ ಪುಸ್ತಕಗಳನ್ನು ರಚಿಸಲಾಗಿದೆ.. ಎಳವೆಯಲ್ಲೇ ಬದುಕಿಗೆ ಪುಸ್ತಕಗಳು ಪ್ರವೇಶ ಪಡೆದಾಗ, ಪುಸ್ತಕ ಪ್ರೀತಿ ಸಹಜವಾಗಿ ಸಾಧ್ಯವಾಗಬಹುದು
©2025 Book Brahma Private Limited.