ರುಚಿಗೆ ಹುಳಿಯೊಗರು

Author : ಶ್ರೀನಿವಾಸ ವೈದ್ಯ

₹ 95.00




Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 0802661 7100

Synopsys

ಶ್ರೀನಿವಾಸ ವೈದ್ಯ ಅವರ ರುಚಿಗೆ ಹುಳಿಯೊಗರು ಕೃತಿ ಹಾಸ್ಯಲೇಖನ ಸಂಕಲನ. ಹಾಸ್ಯ ಬರಹಗಳ ವೈಶಿಷ್ಟ್ಯ ವಿರುವುದೇ ಅವರ ಅಪ್ಪಟ ದೇಶೀ ಭಾಷೆಯ ಸೊಗಡಿನಲ್ಲಿ. ಧಾರವಾಡದ ಗಂಡುಮೆಟ್ಟಿನ ನೆಲದ ಭಾಷೆಯ ಸ್ಪಷ್ಟೋಕ್ತಿಗಳನ್ನೂ, ಉತ್ಪ್ರೇಕ್ಷಾಲಂಕಾರದ ಸೊಗಡನ್ನೂ ನಲವತ್ತೈವತ್ತು ವರ್ಷಗಳ ಹಿಂದೆ ಯುವಕರಾಗಿದ್ದ ಇಂದಿನ ಹಿರಿಯರು ಹೊಮ್ಮಿಸಿದ ರಸಪ್ರಸಂಗಗಳ ಸಹಜ ಹಾಸ್ಯೋಲ್ಲಾಸವನ್ನೂ ಮೇಳವಿಸಿಕೊಂಡು ಬಂದಿರುವ ಈ ಹನ್ನೆರಡೂ ಹಾಸ್ಯಪ್ರಬಂಧಗಳು ಓದುತ್ತಿರುವಾಗ ಅಡಿಗಡಿಗೂ ನಗೆಯನ್ನುಕ್ಕಿಸುವುದರಲ್ಲಿ ಯಶಸ್ವಿಯಾಗಿವೆ ಎನ್ನುವುದು ಖಂಡಿತ. " ರುಚಿಗೆ ಹುಳಿಯೊಗರು" ಹಾಸ್ಯ ಪ್ರಬಂಧ ಸಂಕಲನದಲ್ಲಿರುವ ಎಲ್ಲಾ ಲೇಖನಗಳಲ್ಲೂ ಬಳಕೆಯಾಗಿರುವ ಉತ್ತರ ಕರ್ನಾಟಕದ ಆಡುಭಾಷೆಯ ಹಸೀ ಹಸೀ ಬಳಕೆ ಇಲ್ಲಿ ನಗೆಯೆಬ್ಬಿಸುವ ಆಶಯವನ್ನು ಸಮರ್ಥವಾಗಿ ಪೂರ್ಣಗೊಳಿಸಿದೆ. ಭಾಗೀರ್ತಿಬಾಯಿ, ಪರಮೇಶಿ, ಶಾಮೂಕಾಕಾ, ಭೀಮೂಕಾಕಾ, ಬಳ್ಳಾರಿ ಹನುಮಂತರಾಯ, ಕೇಶವಯ್ಯಂಗಾರಿ, ಅಲಮೇಲುಗಳೆಲ್ಲ ಈ ಹಾಸ್ಯತೆನೆಗಳ ಮುಖ್ಯ ದೇಟುಗಳಾಗಿ ಒಂದೊಂದು ಪ್ರಸಂಗದಲ್ಲೂ ಮನುಷ್ಯಸ್ವಭಾವದ ವಿಡಂಬನಾತ್ಮಕ ರೂಪ ಸ್ವರೂಪಗಳನ್ನು ತೆರೆದಿಡುತ್ತಾರೆ.

About the Author

ಶ್ರೀನಿವಾಸ ವೈದ್ಯ
(04 April 1936 - 21 April 2023)

ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣ ಗೊಳಿಸಿದರು. 1959ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಅವರು ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ ಪಡೆದ ಪತ್ರಿಕೋದ್ಯಮ ಡಿಪ್ಲೊಮಾವನ್ನು ಪೂರೈಸಿದರು. ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ. ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ...

READ MORE

Related Books