ಋಗ್ವೇದ ಸಂಹಿತಾ ಭಾಗ-7

Author : ಎಚ್.ಪಿ. ವೆಂಕಟರಾವ್ ಶರಣ್ಮಾ

Pages 568

₹ 160.00




Year of Publication: 2009
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ. ಸಿ ರೋಡ್, ಬೆಂಗಳೂರು-02

Synopsys

ಋಗ್ವೇದ ಸಂಹಿತಾ ಭಾಗ-7 ಕೃತಿಯು ಹೆಚ್. ಪಿ ವೆಂಕಟರಾವ್ ಶರಣ್ಮಾ ಅವರ ಅನುವಾದಿತ ಕೃತಿಯಾಗಿದೆ. ಪ್ರಥಮಾಷ್ಟಕದಲ್ಲಿ ಆರನೆಯ ಅಧ್ಯಾಯವಾಗಿರುವ ಈ ಕೃತಿಯು ಪ್ರಥಮ ಮಂಡಲದ ಸೂಕ್ತಗಳು 81-94 ಅನ್ನು ಒಳಗೊಂಡಿದೆ. ಋಗ್ವೇದ ಸಂಹಿತಾ ಪುಟಗಳನ್ನು ಯುವಜನಾಂಗಕ್ಕೆ ಪರಿಚಯಿಸಬೇಕೆಂಬ ಉದ್ದೇಶದೊಂದಿಗೆ ರೂಪಿತವಾಗಿರುವ ಈ ಕೃತಿಯು ಋಗ್ವೇದವನ್ನು ಅರ್ಥಾನುವಾದ ವಿವರಣೆಗಳೊಡನೆ ವಿವರಿಸುತ್ತದೆ. ಇಲ್ಲಿ ಅನುಕ್ರಮಣಿಕೆಗಳ ವಿವರಣೆಯು ದೊರೆಯುತ್ತದೆ. ಅನುಕ್ರಮಣಿಕೆಯೆಂದರೆ ಶೌನಕಋಷಿಗಳಿಂದ ಪ್ರೋಕ್ತವಾದ ಸರ್ವಾನುಕ್ರಮಣಿ. ಇದರಲ್ಲಿ ಪ್ರತಿಸೂಕ್ತದಲ್ಲಿರುವ ಋಕ್ಸಂಖ್ಯೆ, ಆ ಋಕ್ಕುಗಳ ದ್ರಷ್ಟೃಗಳಾದ ಋಷಿಗಳ ಹೆಸರು, ಸೂಕ್ತದ ದೇವತೆ ಮತ್ತು ಋಕ್ಕುಗಳ ಛಂದಸ್ಸು ಮೊದಲಾದ ವಿಷಯಗಳ ನಿರೂಪಣೆ ಇದೆ. ಈ ಅನುಕ್ರಮಣಿಕೆಯಲ್ಲದೆ ಋಷಿಗಳ ವಿಷಯಗಳನ್ನು ಹೇಳುವ ಆರ್ಷೇಯಾನುಕ್ರಮಣಿ, ಛಂದಸ್ಸಿನ ವಿಷಯವನ್ನು ಹೇಳುವ ಛಂದೋನುಕ್ರಮಣಿ ಮೊದಲಾದ ಬೇರೆ ಬೇರೆ ಅನುಕ್ರಮಣಿಕೆಗಳಿವೆ. ಈ ಗ್ರಂಥದಲ್ಲಿ ವೇದದಲ್ಲಿ ಹೇಳಿರುವ ಛಂದಸ್ಸಿನ ವಿಷಯಗಳ ಜತೆಯಲ್ಲಿ ಆಧುನಿಕ ಸಂಸ್ಕೃತದಲ್ಲಿ ಬಳಕೆಯಲ್ಲಿರುವ ಶ್ಲೋಕಗಳ ವೃತ್ತಲಕ್ಷಣಾದಿಗಳ ವಿವರವೂ ಇರುವುದರಿಂದ ಈ ಗ್ರಂಥವು ಅಷ್ಟು ಪ್ರಮಾಣಾರ್ಹವಲ್ಲ. ಈ ವಿಷಯದಲ್ಲಿ ಕಾತ್ಯಾಯನಮಹರ್ಷಿವಿರಚಿತವಾದ ಸರ್ವಾನುಕ್ರಮಣಿಯೆಂಬ ಗ್ರಂಥವು ಪ್ರಾಚೀನವೂ ಪ್ರಮಾಣಾರ್ಹವೂ ಆಗಿರುವುದರಿಂದ ಅದರಲ್ಲಿರುವ ವಿಷಯನಿರೂಪಣೆಯ ಆಧಾರದ ಮೇಲೆ ಋಗ್ವೇದದ ಛಂದಸ್ಸುಗಳ ವಿಷಯವಾಗಿ ಸೂಕ್ಷ್ಮ ವಿವರಣೆಯನ್ನು ಇಲ್ಲಿ ಕೊಟ್ಟಿರುತ್ತಾರೆ.

About the Author

ಎಚ್.ಪಿ. ವೆಂಕಟರಾವ್ ಶರಣ್ಮಾ

ಅನುವಾದಕ ಎಚ್.ಪಿ. ವೆಂಕಟರಾವ್ ಶರಣ್ಮಾ ಅವರು ಮೈಸೂರು ಅರಮನೆಯ ಆಸ್ಥಾನ ವಿದ್ಯಾಂಸರಾಗಿದ್ದರು. ವೇದ ಪಾರಂಗತರು. ಋಗ್ವೇದ ಸಂಹಿತಾ ಸಂಶೋಧನಾ ವಿಚಾರದಡಿ 30  ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು : ಋಗ್ವೇದ ಸಂಹಿತೆ ಭಾಗ-1, ಋಗ್ವೇದ ಸಂಹಿತೆ ಭಾಗ-2, ಋಗ್ವೇದ ಸಂಹಿತೆ ಭಾಗ-3, ಋಗ್ವೇದ ಸಂಹಿತೆ ಭಾಗ-4, ಋಗ್ವೇದ ಸಂಹಿತೆ ಭಾಗ-5, ಋಗ್ವೇದ ಸಂಹಿತೆ ಭಾಗ-6, ಋಗ್ವೇದ ಸಂಹಿತೆ ಭಾಗ-7, ಋಗ್ವೇದ ಸಂಹಿತೆ ಭಾಗ-8, ಋಗ್ವೇದ ಸಂಹಿತೆ ಭಾಗ-9, ಋಗ್ವೇದ ಸಂಹಿತೆ ಭಾಗ-10, ಋಗ್ವೇದ ಸಂಹಿತೆ ಭಾಗ-11, ಋಗ್ವೇದ ಸಂಹಿತೆ ಭಾಗ-12, ಋಗ್ವೇದ ಸಂಹಿತೆ ಭಾಗ-13, ಋಗ್ವೇದ ಸಂಹಿತೆ ಭಾಗ-14, ಋಗ್ವೇದ ...

READ MORE

Related Books