ರಷ್ಯಾ ಎಂದರೆ ರಷ್ಯಾ

Author : ಲತಾ ಗುತ್ತಿ

Pages 175

₹ 150.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 0804011 4455

Synopsys

ಲತಾ ಗುತ್ತಿ ಅವರು ಬರೆದ ಪ್ರವಾಸ ಕಥನ ’ರಷ್ಯಾ ಎಂದರೆ ರಷ್ಯಾ’. ರಷ್ಯಾ ಪ್ರವಾಸದಲ್ಲಿ ತಾವು ಕಂಡ, ಅನುಭವ, ಅನುಭಾವಿಸಿದ ಹಲವಾರು ವಿಷಯಗಳ ಕುರಿತು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ರಷ್ಯಾ ಬಗ್ಗೆ ಬರೆಯುತ್ತಾ ಲತಾ, ’ರಷ್ಯಾ ಎಂದರೆ ಟಾಲ್ ಸ್ಟಾಯ್, ಪುಷ್ಕಿನ್,ಡಾಸ್ಟೋವಸ್ಕಿ,ಮ್ಯಾಕ್ಸಿಂ ಗಾರ್ಕಿ,ಅ್ಯಂ‌ಟನ್ ಚೆಕಾಫ್,ನಿಕೋಲಾಯ್ ಗೊ‌ಗೊ‌ಲ್,ಬೋ‌‌ರಿಸ್ ಪಾಸ್ಟರ್‌‌‌‌‌ನಾಕ್, ಮಾಯ್ಕೋವಾಸ್ಕಿ,ಅಲೆಕ್ಸಾಂಡರ್ ಸೊಲ್ಜೆನಿ‌‌‌‌‌‌‌‌‌ತ್ಸ್ಯಾನ್......ರಷ್ಯಾ ಎಂದರೆ ಝಾರ್‌‌‌‌‌ ಚಕ್ರವರ್ತಿ ಗಳ ಸಾಮ್ರಾಜ್ಯ, ಬೊಲ್‌ಶ್ವಿಕ್‌ ಕ್ರಾಂತಿಕಾರಿಗಳು, ಯುದ್ಧ, ಸಮಾಜವಾದಿ ಲೆನಿನ್, ಕಮ್ಯುನಿಸ್ಟ್ ಆಡಳಿತ, ಸೊವಿಯತ್ ಒಕ್ಕೂಟ ಪತನ, ಹೊಸ ರಷ್ಯಾದ ಪೆರೆಸ್ಟ್ರೊಯಿಕ್ ಮತ್ತು ಗ್ಲಾಸ್ ನೋಸ್ಟ....-ರಷ್ಯಾ ಎಂದರೆ ಕ್ರೆಮ್ಲಿನ್,ಬ್ಯಾಸಿಲ್ ಕೆಥಡ್ರಲ್ ಚರ್ಚ್‌ಗಳ, ಮೊನಾಸ್ಟರಿಗಳ‌‌‌‌‌, ಕಾನ್ವೆಂಟ್‌ಗಳ,ಅರ‌‌‌‌ಮನೆ‌ಗಳ,ಮ್ಯೂಸಿಯಂಗಳ ,ಕಾರಂಜಿ ಉದ್ಯಾನಗಳ, ಬಿಚ್೯ ವಿಲ್ಲೋ ಮರಗಳ,ವೋಲ್ಗಾ-ನೇವಾ-ಮೊಸ್ಕ್ವಾ ನದಿಗಳ.... ರಷ್ಯಾ ಎಂದರೆ ಬ್ಯಾಲೆ, ಸಕ್೯ಸ್,  ಸಂಗೀತ, ಚಿತ್ರಕಲೆ, ಕ್ಲಬ್, ಪಬ್, ಜನಪ್ರಿಯ ವೋಡ್ಕಾ-ಶಾಂಪೇನ್....... ರಷ್ಯಾ ಎಂದರೆ ಹಿಮಾಚ್ಛಾದಿತ ಪ್ರದೇಶ, ಬಯಕ್ಲಾ ಸರೋವರ,ಉರಾಲ್ಸ್ -ಸೈಬೇರಿಯಾ ಪರ್ವತಗಳು,ಹಿಮಪರ್ವತಗಳು, ಹಿಮಪ್ರಾಣಿಗಳು,ತುಪ್ಪಳದ ಕೋಟು- ಕ್ಯಾಪ್ -ಕೈಗವಚಗಳು ....ರಷ್ಯಾ ಎಂದರೆ ಒಲಂಪಿಕ್ ಚಿನ್ನದ ಪದಕಗಳು,ಸ್ಪುಟ್ನಿಕ್ ಖಗೋಳಯಾತ್ರಿ ಯೂರಿ ಗಗಾರಿನ್.....ರಷ್ಯಾ ಎಂದರೆ ಯಂತ್ರೋಪಕರಣಗಳು, ಭೂಗತ ಮೆಟ್ರೋ, ಖನಿಜ ಸಂಪತ್ತು ಇಂತಹ ಹಲವಾರು ಕನಸಿನ ಲೋಕ ನನ್ನೊಳಗೆ ಕೂತಿತ್ತಲ್ಲ’ ಎಂದಿರುವ ಲೇಖಕಿ ರಷ್ಯಾ ಕುರಿತು ಸಮಗ್ರ ಚಿತ್ರಣವನ್ನು ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಲತಾ ಗುತ್ತಿ
(12 August 1953)

ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.  “ಪ್ರವಾಸ ಸಾಹಿತ್ಯ ...

READ MORE

Related Books