ಸಾಧನೆಯ ಶಿಖರಾರೋಹಣ: ಪ್ರಧಾನಮಂತ್ರಿಯಾಗಿ ಎಚ್.ಡಿ. ದೇವೇಗೌಡ ಅವರ ಸಾಧನೆಗಳು

Author : ಪ್ರಧಾನ್ ಗುರುದತ್ತ

Pages 391

₹ 450.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

‘ಸಾಧನೆಯ ಶಿಖರಾರೋಹಣ’: ಪ್ರಧಾನಮಂತ್ರಿಯಾಗಿ ಎಚ್.ಡಿ. ದೇವೇಗೌಡ ಅವರ ಸಾಧನೆಗಳು ಕೃತಿಯನ್ನು ಲೇಖಕ ಪ್ರಧಾನ ಗುರುದತ್ತ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ರಾಜಕೀಯ ಬದುಕಿನ ಮಹತ್ವದ ಘಟ್ಟಗಳ ವಿವರಣೆಗಳನ್ನು ನೀಡಲಾಗಿದೆ. ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನಮಂತ್ರಿ ಹುದ್ದೆ ಸ್ವೀಕರಿಸಿ ಎಚ್.ಡಿ.ದೇವೇಗೌಡರು ಮಾಡಿದ ಜನಪರ ಕಾರ್ಯಗಳು ಮತ್ತು ಅವರ ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು.

About the Author

ಪ್ರಧಾನ್ ಗುರುದತ್ತ
(30 May 1938)

ಲೇಖಕ, ಅನುವಾದಕ ಪ್ರಧಾನ್ ಗುರುದತ್‌ ಅವರು ಹುಟ್ಟಿದ್ದು 30-05-1938ರಂದು ಚಿಕ್ಕಬಳ್ಳಾಪುರದಲ್ಲಿ.  ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಕನ್ನಡದಲ್ಲಿ ಎಂ.ಎ.ಆನರ್ಸ್, ಅನುವಾದದಲ್ಲಿ ಎಂ.ಎ., ಜೊತೆಗೆ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ. ಪಿಎಚ್.ಡಿ ವಿಷಯವಾಗಿ ಕೃಷ್ಣ ಕಥೆಯ ಉಗಮ ಮತ್ತು ವಿಕಾಸ. ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ. ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದಾರೆ. ಬಹುಮುಖ ಪ್ರತಿಭೆ, ಅಪರೂಪದ ಪ್ರಾಧ್ಯಾಪಕರು, ಬಹುಭಾಷಾಪಂಡಿತರು ಆಗಿರುವ ಪ್ರಧಾನ್ ಗುರುದತ್ತರು 150ಕ್ಕೂ ಮಿಗಿಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸುಮಾರು ...

READ MORE

Related Books