ಸಾಹಿತ್ಯ ಮತ್ತು ಸಾಹಿತ್ಯೇತರ

Author : ಎಸ್. ಶಿವಾನಂದ

₹ 230.00




Year of Publication: 2017
Published by: ಚಿಂತನ ಪುಸ್ತಕ
Address: #1863, 11ನೇ ಮುಖ್ಯ ರಸ್ತೆ, 38ನೇ ಅಡ್ಡರಸ್ತೆ, 4 ಟಿ. ಬ್ಲಾಕ್ ಜಯನಗರ. ಬೆಂಗಳೂರು-560041
Phone: 9902249150

Synopsys

ಲೇಖಕ ಎಸ್. ಶಿವಾನಂದ ಅವರ ’ಸಾಹಿತ್ಯ ಮತ್ತು ಸಾಹಿತ್ಯತೇತರ’ ಕೃತಿಯು ಲೇಖನಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ರಹಮತ್ ತರೀಕೆರೆ ಅವರು, ಈ ಸಂಕಲನದಲ್ಲಿ ಎರಡು ಭಾಗಗಳಿದ್ದು, ಮೊದಲನೆಯ ಭಾಗದಲ್ಲಿ ಪರಿಕಲ್ಪನಾತ್ಮಕ ಚರ್ಚೆ ಮಾಡುವ ತಾತ್ವಿಕ ಗಹನತೆಯ ಲೇಖನಗಳಿವೆ. ಎರಡನೆಯದರಲ್ಲಿ ಕೃತಿ ವಿಶ್ಲೇಷಣೆಗಳಿವೆ, ಇವೆರಡರಲ್ಲಿ ಮೊದಲ ಭಾಗದಲ್ಲಿರುವ ಪರಿಕಲ್ಪನಾತ್ಮಕ ಚರ್ಚೆಯ ಲೇಖನಗಳು ಬಹಳ ಮಹತ್ವದ್ದಾಗಿವೆ ಎಂದಿದ್ದಾರೆ. ವಿಭಿನ್ನ ಸಾಹಿತ್ಯ ವಿಮರ್ಶನ ಮತ್ತು ರಾಜಕೀಯ ಸಾಮಾಜಿಕ ತತ್ವ ಸಿದ್ದಾಂತಗಳ ಜತೆ ಭಿನ್ನಮತದ ಮೂಲಕ ಮುಖಾಮುಖಿ ಮಾಡುವ ಶಿವಾನಂದರ ಚಿಂತನೆಯ ಅತ್ಯುತ್ತಮ ಫಲಿತಗಳನ್ನು ಈ ಘಟ್ಟದ ಲೇಖನಗಳಲ್ಲಿ ಕಾಣಬಹುದು. ಇಲ್ಲಿನ ಲೇಖನಗಳು ತಾತ್ವೀಕರಣದ ನೆಯ್ಗೆಯಿಂದ ಕೂಡಿದ್ದು ಚಿಂತನ ಪ್ರಧಾನವಾಗಿವೆ. ಸಮಾಜವಾದಿ ದೃಷ್ಟಿ ಕೋನದಿಂದ ವರ್ತಮಾನದ ಬೆಳವಣಿಗೆಗಳನ್ನು ನೋಡುವ ಹರಿತವಾದ ನೋಟಕ್ರಮವಿರುವ ಲೇಖಕರು ಇಲ್ಲಿ ವಿಮರ್ಶಾತತ್ವಗಳನ್ನು ಅಥವಾ ಸಮಾಜೋ-ರಾಜಕೀಯ ತತ್ವಗಳನ್ನು ವಿಶ್ಲೇಷಿಸುವಾಗ, ಅವುಗಳ ಹಿಂದಿನ ಚಾರಿತ್ರಿಕ ತಿಳಿವು ಕೂಡ ಪ್ರಕಟವಾಗುತ್ತದೆ. ಸಾಹಿತ್ಯಿಕ ಸಂವೇದನೆ ಮತ್ತು ರಾಜಕೀಯ ಪ್ರಜ್ಞೆಯೊಂದಿಗೆ ಸಮತೋಲನದಲ್ಲಿ ಹೊಕ್ಕಾಡುವ ಪ್ರಕ್ರಿಯೆಯಲ್ಲಿ ಇಲ್ಲಿನ ಬರಹಗಳು ಹುಟ್ಟಿವೆ. ಜನಪದ ಕತೆಗಳ ಸಂಸ್ಕೃತಿ ವಿಮರ್ಶೆಯುಳ್ಳ ಈ ಲೇಖನಗಳಲ್ಲಿ ಬಹುತೇಕ ಜನಪದ ವಿದ್ವಾಂಸರು ಕೊಡಲಾಗುವ ನೋಟಗಳನ್ನು ಶಿವಾನಂದ ಅವರು ಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಎಸ್. ಶಿವಾನಂದ

ಎಸ್. ಶಿವಾನಂದ ಅವರು ವಿಮರ್ಶಕರು, ಚಿಂತಕರು ಲೇಖಕರು. ಅವರದು ಮೂಲತಃ ಪ್ರಮೇಯ ಕಟ್ಟುವ ಮನಸ್ಸು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವರಿಗೆ ಪಾಶ್ಚಿಮಾತ್ಯ ಸಾಹಿತ್ಯ ಮತ್ತು ಥಿಯರಿಗಳ ಅಭ್ಯಾಸದ ಹಿನ್ನೆಲೆಯೂ ಇದೆ. ಕೃತಿಗಳು: ಮಹಾತ್ಮ ಮತ್ತು ಗುರುದೇವ ಸಂವಾದ, ಸಾಹಿತ್ಯ ಮತ್ತು ಸಾಹಿತ್ಯೇತರ ...

READ MORE

Related Books