ಸಾಹಿತ್ಯ ಒಂದು ಉಪನ್ಯಾಸ

Author : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)

Pages 425

₹ 1.00




Year of Publication: 1954
Published by: ಮಾಸ್ತಿ ವೆಂಕಟೇಶ ಅಯ್ಯಂಗಾರ್
Address: ಬಿ.ಬಿ.ಡಿ.ಪವರ್ ಪ್ರೆಸ್, ಅರಳೇಪೇಟೆ, ಬೆಂಗಳೂರು

Synopsys

ಶ್ರೀನಿವಾಸ ಕಾವ್ಯನಾಮದ ಮೂಲಕ ಖ್ಯಾತರಾದ ಮಾಸ್ತಿ ವೆಂಕಟೇಶ ಅಯಂಗಾರ್ ಅವರು ನಾಡಿನ ಬೇರೆ ಬೇರೆ ಕಡೆ ಮಾಡಿದ ಭಾಷಣ-ಉಪನ್ಯಾಸಗಳು ಈ ಕೃತಿಯಲ್ಲಿ (ಸಾಹಿತ್ಯ ಒಂದು ಉಪನ್ಯಾಸ) ಒಳಗೊಂಡಿವೆ.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕರ್ಣಾಟಕ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ (1924ರಲ್ಲಿ ಮೊದಲು ಪ್ರಕಟ ಹಾಗೂ 1954ರಲ್ಲಿ ಮರುಮುದ್ರಣ) ಸಾಹಿತ್ಯ ಕುರಿತು ನೀಡಿದ ಉಪನ್ಯಾಸದ ಪೂರ್ಣಪಾಠ ಇಲ್ಲಿದೆ. ಕನ್ನಡದ ಸೇವೆ ವಿಷಯವಾಗಿ (1930 ರಲ್ಲಿ ಮೊದಲು ಪ್ರಕಟ ಹಾಗೂ 1944ರಲ್ಲಿ ಮರು ಪ್ರಕಟ) ಬೆಳಗಾವಿಯಲ್ಲಿ ಜರುಗಿದ (1929) ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ದೇಶದ ಸಂಸ್ಕೃತಿ ವಿಷಯದಡಿ ಕರ್ಣಾಟಕದ ಜನತೆಯ ಸಂಸ್ಖತಿ ಕುರಿತು ಮಾಡಿರುವ (ಮೊದಲು ಪ್ರಕಟ-1931, ಮರುಮುದ್ರಣ-1944) ಭಾಷಣ, ಪ್ರಬುದ್ಧ ಕರ್ಣಾಟಕ ಪತ್ರಿಕೆಯಲ್ಲಿ1937ರಲ್ಲಿ ಪ್ರಕಟವಾದ ಉಪನ್ಯಾಸ ’ಕರ್ಣಾಟಕ ಜಾನಪದ ಸಾಹಿತ್ಯ’ ಹಾಗೂ ಹೈದರಾಬಾದ್ ನಲ್ಲಿ (1941ರಲ್ಲಿ) ಜರುಗಿದ ಪ್ರಾಚ್ಯ ಸಮ್ಮೇಳನದ (ಕನ್ನಡ ವಿಭಾಗ) ಅಧ್ಯಕ್ಷೀಯ ಭಾಷಣ-ತಾಯ್ನುಡಿಯ ತಮ್ಮಡಿ, ಹಲವು ಭಾಷಣಗಳ ಲೇಖನಗಳ ಸಂಗ್ರಹ-ಪ್ರಸಂಗ (ಮೊದಲ ಮುದ್ರಣ-1943)  ಈ ಕೃತಿಯು ಒಳಗೊಂಡಿದೆ.

 

About the Author

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)
(08 June 1891 - 07 June 1986)

‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...

READ MORE

Related Books